Latest

‘ಚಿಕನ್ ಟಿಕ್ಕಾ ಮಸಾಲಾ’ ಜನಕ ನಿಧನ

ಪ್ರಗತಿವಾಹಿನಿ ಸುದ್ದಿ, ಗ್ಲಾಸ್ಗೋ: ಬ್ರಿಟನ್‌ನ ಅಚ್ಚುಮೆಚ್ಚಿನ ಮೇಲೋಗರ ಎಂದು ಪರಿಗಣಿಸಲಾದ ‘ಚಿಕನ್ ಟಿಕ್ಕಾ ಮಸಾಲಾ ಜನಕ’ ಖ್ಯಾತಿಯ ಬಾಣಸಿಗ ಅಲಿ ಅಹ್ಮದ್ ಅಸ್ಲಾಮ್ (77) ನಿಧನರಾದರು.

ಅವರ ನಿಧನವನ್ನು ಗ್ಲಾಸ್ಗೋದಲ್ಲಿನ ಅವರ ಶೀಶ್ ಮಹಲ್ ರೆಸ್ಟೋರೆಂಟ್ ಪ್ರಕಟಿಸಿದೆ.  ಅವರ ನಿಧನದ ಹಿನ್ನೆಲೆಯಲ್ಲಿ ಶೀಶ್ ಮಹಲ್ ನ್ನು 48 ಗಂಟೆಗಳ ಕಾಲ ಬಂದ್ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Home add -Advt

ಅವರು 70 ರ ದಶಕದಲ್ಲಿ ತಮ್ಮ ರೆಸ್ಟೋರೆಂಟ್ ಶೀಶ್ ಮಹಲ್‌ನಲ್ಲಿ ಟೊಮೆಟೊ ಸೂಪ್‌ನ ಟಿನ್ ನಿಂದ ತಯಾರಿಸಿದ ಸಾಸ್ ಅನ್ನು ಸುಧಾರಿಸುವ ಮೂಲಕ ಖಾದ್ಯವನ್ನು ಕಂಡುಹಿಡಿದರು. ಅವರು ನಿತ್ಯ ತಮ್ಮ ರೆಸ್ಟೀರಂಟ್ ನಲ್ಲೇ ಊಟ ಮಾಡುತ್ತಿದ್ದರು ಎಂದು ಅವರ ಸೋದರಳಿಯ ಆಂಡ್ಲೀಬ್ ಅಹ್ಮದ್ ಹೇಳಿದ್ದಾರೆ.

ಕಳೆದ ವರ್ಷ ಅವರು ಅಸ್ವಸ್ಥರಾಗಿದ್ದ ಅವರನ್ನು ಕ್ರಿಸ್ಮಸ್ ದಿನ ತಾವು ಅವರನ್ನು ನೋಡಲು ಹೋಗಿದ್ದನ್ನುಅಹ್ಮದ್ ನೆನಪಿಸಿಕೊಂಡಿದ್ದಾರೆ.

ತಮ್ಮ ಚಿಕನ್ ಟಿಕ್ಕಾ ತುಂಬಾ ಒಣಗಿದೆ ಎಂದು ಗ್ರಾಹಕರು ದೂರಿದ ನಂತರ ಚಿಕನ್ ಟಿಕ್ಕಾ ಮಸಾಲಾ ಪಾಕವಿಧಾನ ಕಂಡುಹಿಡಿದಿದ್ದಾಗಿ 2009ರಲ್ಲಿ ಅಲಿ ಹೇಳಿದ್ದರು. ಗ್ರಾಹರೊಬ್ಬರು “ಚಿಕನ್ ಟಿಕ್ಕಾಒಣಗಿದೆ. ನಾನು ಸ್ವಲ್ಪ ಸಾಸ್ ತೆಗೆದುಕೊಳ್ಳುತ್ತೇನೆ,” ಎಂದು ಹೇಳುತ್ತಿದ್ದಂತೆ ಅದೇ ಸಾಸ್ ಬಳಸಿ ಚಿಕನ್ ಬೇಯಿಸುವ ಮೂಲಕ ಻ವರು ಚಿಕನ್ ಟಿಕ್ಕಾ ಮಸಾಲಾ ಅನ್ವೇಷಿಸಿದ್ದರು. ಇದು ಬ್ರಿಟಿಷ್ ರೆಸ್ಟೋರೆಂಟ್‌ಗಳಲ್ಲಿ ಅತ್ಯಂತ ಜನಪ್ರಿಯ ಭಕ್ಷ್ಯವಾಯಿತು.

ಮೂಲತಃ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದವರಾದ ಅಲಿ, ಚಿಕ್ಕ ಹುಡುಗನಾಗಿದ್ದಾಗ ತನ್ನ ಕುಟುಂಬದೊಂದಿಗೆ ಗ್ಲಾಸ್ಗೋಗೆ ತೆರಳಿದರು.  1964 ರಲ್ಲಿ ಪಶ್ಚಿಮ ಗ್ಲಾಸ್ಗೋದಲ್ಲಿ ಶೀಶ್ ಮಹಲ್ ತೆರೆದಿದ್ದರು.

ಅಲಿ ಅವರು ಮೂವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

*ಅವಧಿ ಮುನ್ನ ಚುನಾವಣೆ ವಿಚಾರ; ಸಿಎಂ ಬೊಮ್ಮಾಯಿ ಸ್ಪಷ್ಟನೆ*

https://pragati.taskdun.com/vidhanasabha-electiond-k-shivakumarcm-basavara-bommaiclarification/

ಮೂಡ್ನಾಕೂಡು ಚಿನ್ನಸ್ವಾಮಿ, ಪದ್ಮರಾಜ ದಂಡಾವತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

https://pragati.taskdun.com/central-sahitya-akademi-award-to-moodnakood-chinnaswamy-padmaraja-dandavathy/

ಕಿರುತೆರೆ ನಟಿ ಉರ್ಫಿ ಜಾವೇದ್ ಗೆ ರೇಪ್ ಆ್ಯಂಡ್ ಮರ್ಡರ್ ಬೆದರಿಕೆ; ಆರೋಪಿ ಬಂಧನ

https://pragati.taskdun.com/tv-actress-urfi-javed-threatened-with-rape-and-murder-accused-arrested/

Related Articles

Back to top button