*ಅಕ್ರಮ ತೈಲ ಸಾಗಾಟ: ಟ್ಯಾಂಕರ್ ವಶಕ್ಕೆ ಪಡೆದ ಬೆಳಗಾವಿ ಪೊಲೀಸರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಖಚಿತ ಮಾಹಿತಿ ಮೆರೆಗೆ ದಾಳಿ ನಡೆಸಿದ ಬೆಳಗಾವಿ ಪೊಲೀಸರು ಅಕ್ರಮ ಡೀಸೆಲ್ ಸಾಗಿಸುತ್ತಿದ್ದ ಟ್ಯಾಂಕರ್ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಖಚಿತ ಮಾಹಿತಿ ಮೆರೆಗೆ ದಾಳಿ ನಡೆಸಿದ ಮಾಳಮಾರುತಿ ಪೊಲೀಸ್ ಠಾಣೆಯ ತಂಡ ಟ್ಯಾಂಕರ್ ಅನ್ನು ಪರಿಶೀಲಿಸಿ ನೋಡಿದಾಗ ಅನಧಿಕೃತವಾಗಿ ಮಹಾರಾಷ್ಟ್ರ ರಾಜ್ಯದಿಂದ ಕರ್ನಾಟಕಕ್ಕೆ ಡಿಸಿಲ್ ಸಾಗಿಸುತ್ತಿರುವ ಬಗ್ಗೆ ಗೊತ್ತಾಗಿದೆ. ಬಳಿಕ ಟ್ಯಾಂಕರ್ ವಾಹನ ಹಾಗೂ ವಾಹನದಲ್ಲಿದ್ದ ಚಾಲಕನಿಗೆ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಯಾವುದೇ ದಾಖಲಾತಿಗಳನ್ನು ಹೊಂದದೆ ಅಕ್ರಮವಾಗಿ ತೈಲ ಸಾಗಾಟ ಮಾಡುತ್ತಿರುರುವುದು ಬೆಳಕಿಗೆ ಬಂದಿದೆ.
ಈ ಪ್ರಕರಣದಲ್ಲಿ ರಾಜಸ್ಥಾನ ಮೂಲದ ದಿನೇಶಕುಮಾರ ಭಾಗಿರತ್ ರಾಮಜಿ, ಸುಖದೇವ್ ಬಿಯಾರಾಮ್, ಮಹಾರಾಷ್ಟ್ರ ಮೂಲದ ಇಸ್ತಿಯಾಕ್ ಶೇಖ್, ಕುಂದನ್ ಮಾತ್ರೆ, ಸಮೀರ ಪರಾಂಗೆ, ಪ್ರವೀಣ ಔತಿ ಹಾಗೂ ತುಮಕೂರು ಮೂಲದ ಅರಿಹಂತ ಎಂಬುವರ ಮೇಲೆ ದೂರು ದಾಖಲಾಗಿದೆ.
ಪ್ರಕರಣದಲ್ಲಿ ಟ್ಯಾಂಕರ್ ಚಾಲಕ ರಾಜಸ್ಥಾನ ಮೂಲದ ದಿನೇಶಕುಮಾರ ಭಾಗಿರತ್ ರಾಮಜಿಯನ್ನು ಬಂಧಿಸಲಾಗಿದೆ.
ಆರೋಪಿ ಮೇಲೆ ಮಾಳಮಾರುತಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 16/2026 ಕಲಂ 3, 7, 10 ಅಗತ್ಯ ವಸ್ತುಗಳ ಕಾಯ್ದೆ-1955, ಕಲಂ 287, ಸಕ 3(5) ಭಾರತೀಯ ನ್ಯಾಯ ಸಂಹಿತೆ-2023. ಮತ್ತು ಮೋಟಾರ್ ಸ್ಪಿರಿಟ್ ಮತ್ತು ಹೈ ಸ್ಪೀಡ್ ಡೀಸೆಲ್ (ಸರಬರಾಜು ನಿಯಂತ್ರಣ) ವಿತರಕ ಮತ್ತು ಮಾಲ್ ಪ್ರಾಕ್ಟಿಸಸ್ ತಡೆಗಟ್ಟುವಿಕೆ ಆದೇಶ-2005 ರ ಸೆಕ್ಷನ್ 2(ಪಿ)(ಕ್ಯೂ), 3 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳಲಾಗಿದೆ.
ಪ್ರಕರಣದಲ್ಲಿ ಸುಮಾರು 12,00,000/- ರೂ.ಗಳ ಟಾಟಾ ಕಂಪನಿಯ ಟ್ಯಾಂಕರ್ ಹಾಗೂ ಅದರಲ್ಲಿದ್ದ 15,00,000/- ರೂ.ಗಳ ವೆಚ್ಚದ ಸುಮಾರು 17 ಸಾವಿರದಷ್ಟು ಡಿಸೇಲ್ (ಪೆಟ್ರೋಲಿಯಮ್ ಉತ್ಪನ್ನ)ವನ್ನು ವಶಪಡಿಸಿಕೊಳ್ಳಲಾಗಿದೆ.

