Karnataka News

*ತಾಳಿ ಕಟ್ಟಿ ಮದುವೆ ಮಂಟಪದಲ್ಲಿಯೇ ಸಾವನ್ನಪ್ಪಿದ ವರ*

ಪ್ರಗತಿವಾಹಿನಿ ಸುದ್ದಿ: ಅದ್ಧೂರಿಯಾಗಿ ಹಸಮೆಣೆಯೇರಿದ್ದ ವರ, ವಧುವಿನ ಕೊರಳಿಗೆ ತಾಳಿ ಕಟ್ಟಿದ ಕೆಲವೇ ಸಮಯದಲ್ಲಿ ಮದುವೆ ಮಂಟಪದಲ್ಲಿಯೇ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ನಂದಿಕೇಶ್ವರ ಕಲ್ಯಾಣ ಮಂಟಪದಲ್ಲಿ ಈ ದುರಂತ ಸಂಭವಿಸಿದೆ. ಪ್ರವೀಣ್ ಕುರ್ನೆ ಮೃತ ವರ.

ಜಮಖಂಡಿ ತಾಲೂಕಿನ ಕುಂಬಾರಹಳ್ಳಿ ನಿವಾಸಿ ಪ್ರವೀಣ್ ಕುರ್ನೆ ಹಾಗೂ ಪೂಜಾ ಅವರ ವಿವಾಹ ಸಮಾರಂಭ ನಡೆದಿತ್ತು. ಮದುವೆ ಮಂಟಪದಲ್ಲಿ ಶುಭ ಮುಹೂರ್ತದಲ್ಲಿ ವಧು ಕೊರಳಿಗೆ ತಾಳಿ ಕಟ್ಟಿದ ಕೆಲ ಹೊತ್ತಲ್ಲೇ ಪ್ರವೀಣ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಮದುವೆ ಸಂಭ್ರಮದಲ್ಲಿದ್ದ ಕಲ್ಯಾಣ ಮಂಟಪ, ವಧು-ವರರ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.

Related Articles

Back to top button