Latest

ಕಾಲೇಜು ಪ್ರಿನ್ಸಿಪಾಲರ ಮೇಲೆ ಆಸಿಡ್ ದಾಳಿ, ಹಲ್ಲೆಗೆ ಯತ್ನ

ಪ್ರಗತಿವಾಹಿನಿ ಸುದ್ದಿ; ಕುಲಬುರ್ಗಿ: ಫಾರ್ಮಸಿ ಕಾಲೇಜು ಪ್ರಾಂಶುಪಾಲರ ಮೇಲೆ ಸಹ ಪ್ರಾಧ್ಯಾಪಕ ಆಸಿಡ್ ದಾಳಿ ನಡೆಸಿ ಹಲ್ಲೆಗೆ ಯತ್ನಿಸಿದ ಘಟನೆ ಕಲಬುರ್ಗಿ ಜಿಲ್ಲೆಯಲ್ಲಿ ನಡೆದಿದೆ.

ಕಲಬುರ್ಗಿಯ ಹೆಚ್.ಕೆ.ಇ ಸೊಸೈಟಿ ಫಾರ್ಮಸಿ ಕಾಲೇಜಿನಲ್ಲಿ ಮಾರ್ಚ್ 21ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಡಾ.ಅರುಣ್ ಕುಮಾರ್ ಎಂಬ ಕಾಲೇಜು ಪ್ರಾಂಶುಪಾಲರ ಮೇಲೆ ಸಹ ಪ್ರಾಧ್ಯಾಪಕ ಶಾಂತವೀರ್ ಆಸಿಡ್ ದಾಳಿ ನಡೆಸಿ ಹಲ್ಲೆಗೆ ಯತ್ನಿಸಿದ್ದಾರೆ.

Home add -Advt

ಕಾಲೇಜು ಪರಿವೀಕ್ಷಣಾ ಇನ್ಸ್ ಪೆಕ್ಟರ್ ಆಗಿ ನೇಮಕವಾಗಲು ಸಾಧ್ಯವಾಗದಂತೆ ಮಾಡಿದ್ದರ ಹಿಂದೆ ಪ್ರಿನ್ಸಿಪಾಲ ಡಾ.ಅರುಣ್ ಕುಮಾರ್ ಕೈವಾಡವಿದೆ ಎಂದು ಭಾವಿಸಿ ಶಾಂತವೀರ ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ.

ಬ್ರಹ್ಮಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button