ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೆ.ಎಲ್.ಎಸ್. ಗೋಗ್ಟೆ ಮಹಾವಿದ್ಯಾಲಯದಲ್ಲಿ ವಾಣಿಜ್ಯ ಶಾಸ್ತ್ರದ ಸಂಶೋಧನಾ ಕೇಂದ್ರದ ನೂತನ ಕಚೇರಿಯ ಉದ್ಘಾಟನೆಯನ್ನು ಸಂಸ್ಥೆಯ ಅಧ್ಯಕ್ಷ ಎ. ಎನ್. ಮಂಡಗಿ ನೆರವೇರಿಸಿದರು.
ಸಂಸ್ಥೆಯ ಚೇರ್ಮನ್ ಪಿ.ಎಸ್. ಸಾಹುಕಾರ ಅವರು, ಎಂ.ಕಾಮ್., ಬಿಬಿಎ, ಬಿಸಿಎ ಮತ್ತು ಸಂಶೋಧನಾ ಕೇಂದ್ರದ ಆಡಳಿತ ನಿರ್ವಹಣಾ ಕೌನ್ಸಿಲ್ ನ ಚೇರ್ಮನ್ ಎಸ್. ಪಿ. ಜೋಶಿ, ಕೌನ್ಸಿಲ್ ಸದಸ್ಯ ಎ.ಕೆ. ತಗಾರೆ, ಹಾಗೂ ಇತರ ಸದಸ್ಯರು, ಸಂಸ್ಥೆಯ ಕಾರ್ಯದರ್ಶಿ ವಿ. ಎಮ್. ದೇಶಪಾಂಡೆ, ಗೋಗ್ಟೆ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಎಚ್. ಎಚ್. ವೀರಾಪುರ, ಎಂ.ಕಾಮ್., ಬಿಬಿಎ, ಬಿಸಿಎ ವಿಭಾಗದ ನಿರ್ದೇಶಕ ಡಾ. ಎಸ್. ಜಿ. ಸೂಗೂರ, ಎಂ.ಕಾಮ್. ಸಂಯೋಜಕರಾದ ಡಾ. ಹರ್ಷಲ್. ತಮ್ಹಣಕರ ಹಾಗೂ ಸಂಶೋಧನಾ ಕೇಂದ್ರಕ್ಕೆ ನಿಯುಕ್ತರಾದ ಡಾ. ನೀತಾ ರಾವ್ ಹಾಗೂ ಇತರರು ಉಪಸ್ಥಿತರಿದ್ದರು.
ಸಂಸ್ಥೆಯು ೨೦೧೨ರಲ್ಲಿಯೇ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ಸಂಶೋಧನಾ ಕೇಂದ್ರವಾಗಿ ಮಾನ್ಯತೆ ಪಡೆದಿದ್ದು ಐದು ಸಂಶೋಧನಾ ಮಾರ್ಗದರ್ಶಕರ ಮಾರ್ಗದರ್ಶನದಲ್ಲಿ ೩೦ ವಿದ್ಯಾರ್ಥಿಗಳು ಪಿ.ಎಚ್.ಡಿ. ಗಾಗಿ ನೋಂದಾಯಿಸಿದ್ದು ಈಗಾಗಲೇ ೩ ವಿದ್ಯಾರ್ಥಿಗಳು ಪಿಎಚ್ಡಿ ಪದವಿಯನ್ನು ಪಡೆದಿದ್ದಾರೆ. ಸಂಶೋಧನಾ ಕೇಂದ್ರಕ್ಕೆ ಹೊಸ ಕಾಯಕಲ್ಪ ನೀಡುವ ದೃಷ್ಟಿಯಿಂದ ಅದಕ್ಕೆ ಪ್ರತ್ಯೇಕ ಕಚೇರಿಯ ವ್ಯವಸ್ಥೆಯನ್ನು ಮಾಡಲಾಗಿದೆ. ಹಾಗೂ ಕೇಂದ್ರದ ನೂತನ ಸಂಯೋಜಕರಾಗಿ ಎಂ.ಕಾಮ್. ವಿಭಾಗದಲ್ಲಿ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಡಾ. ನೀತಾ ರಾವ್ ಅವರನ್ನು ನೇಮಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ