National

*ಸಂಸತ್ತಿನ ಆವರಣದಲ್ಲಿ ವಿಭಿನ್ನವಾಗಿ ಪ್ರತಿಭಟಿಸಿದ ಇಂಡಿಯಾ ಮೈತ್ರಿಕೂಟ*

ಪ್ರಗತಿವಾಹಿನಿ ಸುದ್ದಿ: ಸಂಸತ್ ಕಲಾಪದಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರದ ವಿರುದ್ಧ ನಿರಂತರ ಹೋರಾಟ ನಡೆಸುತ್ತಿರುವ ವಿಪಕ್ಷ ಇಂಡಿಯಾ ಮೈತ್ರಿಕೂಟ ಇಂದು ವಿಭಿನ್ನವಾಗಿ ಪ್ರತಿಭಟನೆಯೊಂದನ್ನು ನಡೆಸಿದೆ.

ಸಂಸತ್ತಿನ ಆವರಣದಲ್ಲಿ ಮೈತ್ರಿಕೂಟದ ಹಲವು ಸಂಸದರು ಒಂದು ಕೈಯಲ್ಲಿ ತ್ರಿವರ್ಣ ಧ್ವಜ ಹಾಗೂ ಇನ್ನೊಂದು ಕೈಯಲ್ಲಿ ಗುಲಾಬಿ ಹಿಡಿದುಕೊಂಡು ಬಿಜೆಪಿ ಸಂಸದರನ್ನು ಸ್ವಾಗತಿಸಿದರು.

ಈ ವಿಶಿಷ್ಠ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಡಿಎಂಕೆ, ಜೆಎಂಎಂ ಮತ್ತು ಎಡಪಕ್ಷಗಳ ಸಂಸದರು ಹಾಗೂ ಇತರರು ಇದ್ದರು. ಇವರೆಲ್ಲರೂ ಸಂಸತ್ತಿನ ಮಕರ ದ್ವಾರದ ಮೆಟ್ಟಿಲುಗಳ ಮುಂದೆ ಸಣ್ಣ ತ್ರಿವರ್ಣ ಧ್ವಜ ಮತ್ತು ಕೆಂಗುಲಾಬಿ ಹಿಡಿದು ನಿಲ್ಲುವ ಮೂಲಕ ಎಲ್ಲರ ಗಮನಸೆಳೆದರು.

ಸದನ ಕಾರ್ಯನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಅದಾನಿ ವಿಷಯ ಸೇರಿದಂತೆ ಎಲ್ಲಾ ವಿಷಯಗಳ ಬಗ್ಗೆ ಚರ್ಚೆಯಾಗುವಂತೆ ಒತ್ತಾಯಿಸಲು ಬಯಸುವುದಾಗಿ ಪ್ರತಿಭಟನಾ ನಿರತ ಸಂಸದರು ತಿಳಿಸಿದರು. ಜೊತೆಗೆ ಹಲವು ಸಂಸದರು ‘ದೇಶವನ್ನು ಮಾರಲು ಬಿಡಬೇಡಿ’ ಎಂಬ ಘೋಷಣಾ ಫಲಕಗಳನ್ನು ಕೂಡ ಹಿಡಿದು ನಿಂತಿದ್ದರು.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button