ಕಂದಕಕ್ಕೆ ಉರುಳಿದ ಕೆಎಸ್ಆರ್ ಟಿಸಿ ಬಸ್; 20ಕ್ಕೂ ಹೆಚ್ಚು ಜನರಿಗೆ ಗಾಯ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು- ಹೊಸಕೋಟೆ ತಾಲೂಕಿನ ಅಟ್ಟಿವಟ್ಟ ಬಳಿ ಕೆಎಸ್ಆರ್ ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ್ದು, ಸುಮಾರು 20 ಜನರಿಗೆ ಗಾಯಗಳಾಗಿವೆ.

ಕೋಲಾರ -ಹೊಸಕೋಟೆ ಹೆದ್ದಾರಿ ಮೂಲಕ ಮಂತ್ರಾಲಯದಿಂದ ಕೋಲಾರಕ್ಕೆ ಹೊರಟಿದ್ದ ಬಸ್ ಉರುಳಿದೆ. ಅತಿ ವೇಗದ ಚಾಲನೆಯಿಂದಾಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಜಿಗಿದು ಸರ್ವೀಸ್ ರಸ್ತೆ ದಾಟಿ ಕಂದಕಕ್ಕೆ ಉಳಿದಿದೆ. ಬಸ್ ನಲ್ಲಿದ್ದವರೆಲ್ಲ ಚಲ್ಲಾಪಿಲ್ಲಿಯಾಗಿ ಉರುಳಿ ಬಿದ್ದಿದ್ದಾರೆ. ನಾಲ್ವರಿಗೆ ಗಂಭೀರ ಗಾಯಗಳಾಗಿವೆ.

Home add -Advt

ಹೊಸಕೋಟೋ ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಅವಘಟದಿಂದಾಗಿ ಕೆಲ ಹೊತ್ತು ರಸ್ತೆ ಸಂಚಾರ ತೀವ್ರ ಅಸ್ತವ್ಯಸ್ತವಾಗಿತ್ತು.

ಶರಾವತಿ ನದಿಗೆ ಬಿದ್ದ ಪ್ರಯಾಣಿಕರ ಬಸ್

https://pragati.taskdun.com/bus-fallsharavati-riversigandurusagara/

ಯುವತಿಯ ಮತಾಂತರ; ಹೆಸರಾಂತ ವೈದ್ಯೆ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲು

https://pragati.taskdun.com/hindu-girlconvertionfir-filemangaloreladya-doctor/

Related Articles

Back to top button