
ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: 1981ರಲ್ಲಿ ಇಂಡಿಯನ್ ಏರ್ ಲೈನ್ಸ್ ನ ವಿಮಾನವೊಂದನ್ನು ಹೈಜಾಕ್ ಮಾಡಿದ ಮೋಸ್ಟ್ ವಾಂಟೆಡ್ ಉಗ್ರ ತಾನು ಪಾಕಿಸ್ತಾನದಲ್ಲಿ ಇರುವುದನ್ನು ಸಾಬೀತುಪಡಿಸಿದ್ದಾನೆ.
ಕಳೆದ ಸೋಮವಾರ ಫೇಸ್ ಬುಕ್ ನಲ್ಲಿ ಪೋಸ್ಟ್ ಒಂದನ್ನು ಹಾಕಿರುವ ಭಯೋತ್ಪಾದಕ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಹಸನ್ ಅಬ್ದಾಲ್‌ನಲ್ಲಿರುವ ಪಂಜಾ ಸಾಹಿಬ್ ಗುರುದ್ವಾರದ ಮುಂದೆ ಸಿಂಗ್ ನಿಂತಿರುವುದು ಕಂಡುಬಂದಿದೆ.
ಅಮೃತಸರಕ್ಕೆ 100 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನವನ್ನು ಬಲವಂತವಾಗಿ ಲಾಹೋರ್‌ಗೆ ತಿರುಗಿಸಿದ್ದ ಈತ ನಂತರದಲ್ಲಿ ತಲೆಮರೆಸಿಕೊಂಡಿದ್ದ.
ಗಜಿಂದರ್ ಸಿಂಗ್ ‘ದಾಲ್ ಖಾಲ್ಸಾ’ ಎಂದು ಕರೆಯಲ್ಪಡುವ ಮೂಲಭೂತ ಸಂಘಟನೆಯ ಸಹ-ಸಂಸ್ಥಾಪಕ.
ಸುದ್ದಿ ಸಂಸ್ಥೆ IANS ಈ ವಿಷಯ ಬಹಿರಂಗಪಡಿಸಿದೆ. ಆತನ ಫೇಸ್ ಬುಕ್ ಪೋಸ್ಟ್ ನಲ್ಲಿ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಹಸನ್ ಅಬ್ದಲ್‌ನಲ್ಲಿರುವ ಗುರುದ್ವಾರ ಪನಿಯಾ ಸಾಹಿಬ್‌ನ ಹೊರಗೆ ಕ್ಯಾಮೆರಾಗೆ ಪೋಸ್ ನೀಡುತ್ತಿರುವುದು ಕಂಡುಬಂದಿದೆ.
ಭಯೋತ್ಪಾದಕರ ಆಶ್ರಯ ತಾಣ ಎಂದೇ ಕುಖ್ಯಾತಿ ಪಡೆದಿರುವ ಪಾಕಿಸ್ತಾನ ಈ ಆರೋಪವನ್ನು ನಿರಾಕರಿಸುತ್ತಲೇ ಬಂದಿದ್ದರೂ ಹಲವು ಬಾರಿ ಅದರ ಕರಾಳ ಮುಖ ಬಹಿರಂಗವಾಗಿದೆ. ಇದೀಗ ಗಜಿಂದರ್ ಸಿಂಗ್ ಫೇಸ್ ಬುಕ್ ಪೋಸ್ಟ್ ನಿಂದಾಗಿ ಮತ್ತೊಮ್ಮೆ ಪಾಕಿಸ್ತಾನದ ಅಸಲಿ ಮುಖ ಬಯಲಾದಂತಾಗಿದೆ.
ಬೆಂಗಳೂರು ವರುಣಾರ್ಭಟ: ಕೋಟ್ಯಾಧಿಪತಿಗಳ ಕಾರು, ಬಂಗಲೆಗಳಿಗೂ ಜಲಕಂಟಕ