CrimeKannada NewsKarnataka NewsNationalWorld

*ಭಾರತಕ್ಕೆ ಬೇಕಿದ್ದ ಮೋಸ್ಟ್ ವಾಂಟೆಡ್ ಉಗ್ರ ನೇಪಾಳದಲ್ಲಿ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಭಾರತಕ್ಕೆ ಹಲವು ಪ್ರಕರಣಗಳಲ್ಲಿ ಬೇಕಿದ್ದ ಮೋಸ್ಟ್ ವಾಂಟೆಡ್ ಉಗ್ರನನ್ನು ದೆಹಲಿ ಪೊಲೀಸ್ ವಿಶೇಷ ಘಟಕ ಮತ್ತು ಭದ್ರತಾ ಸಂಸ್ಥೆಗಳ ತಂಡ ಕಾರ್ಯಾಚರಣೆ ನಡೆಸಿ ಅರೆಸ್ಟ್ ಮಾಡಿದ್ದಾರೆ.‌

ಹಲವು ಅಪರಾದ ಕೃತ್ಯಗಳಲ್ಲಿ ಭಾಗಿ ಆಗಿ ನೇಪಾಳದಲ್ಲಿ ಅಡಗಿ ಕುಳಿತಿದ್ದ ಭಾರತಕ್ಕೆ ಬೇಕಿದ್ದ ಮೋಸ್ಟ್ ವಾಂಟೆಡ್ ಶಸ್ತ್ರಾಸ್ತ್ರ ಪೂರೈಕೆದಾರ ಸಲೀಂ ಅಲಿಯಾಸ್ ಸಲೀಂ ಪಿಸ್ತೂಲ್‌ನನ್ನು ಬಂಧಿಸಲಾಗಿದೆ.

ಹಲವು ದಿನಗಳಿಂದ ಸಲೀಂ ಪಿಸ್ತೂಲ್ ಎಲ್ಲರಿಗೂ ಬೇಕಾಗಿದ್ದ ಉಗ್ರಕ್ರಿಮಿಯಾಗಿದ್ದಾನೆ. ಸಲೀಂ ಪಿಸ್ತೂಲ್ ಕಳೆದ ಹಲವಾರು ವರ್ಷಗಳಿಂದ ಗ್ಯಾಂಗ್‌ಸ್ಟ‌ರ್ ಲಾರೆನ್ಸ್ ಬಿಷ್ಟೋಯ್ ಗ್ಯಾಂಗ್ ಹಾಗೂ ಹಾಶಿಂ ಬಾಬಾ ಸೇರಿದಂತೆ ಅನೇಕ ದರೋಡೆಕೋರರಿಗೆ ಪಾಕಿಸ್ತಾನದಿಂದ ಗುಣಮಟ್ಟದ ಶಸ್ತ್ರಾಸ್ತ್ರಗಳನ್ನ ಪೂರೈಸುತ್ತಿದ್ದ. ಜೊತೆಗೆ ಪಾಕಿಸ್ತಾನ ಗುಪ್ತಚರ ಸಂಸ್ಥೆ ISI ಹಾಗೂ ಡಾನ್ ದಾವೂದ್ ಇಬ್ರಾಹಿಂನ ಡ್ ಕಂಪನಿಯೊಂದಿಗೂ ಸಂಪರ್ಕ ಹೊಂದಿದ್ದ ಅನ್ನೋ ರಹಸ್ಯವನ್ನ ತನಿಖಾಧಿಕಾರಿಗಳು ಸಾಕ್ಷಿ ಸಮೇತ ಬಯಲಿಗೆಳೆದಿದ್ದಾರೆ ಎನ್ನಲಾಗಿದೆ.

ಸಾಕಷ್ಟು ದಿನಗಳಿಂದ ಈತನ ಬಂಧನಕ್ಕೆ ಹೊಂಚು ಹಾಕಲಾಗಿತ್ತು. ಈತ ನೇಪಾಳದಲ್ಲಿ ಅಡಗಿ ಕುಳಿತಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಅಧಿಕಾರಿಗಳ ತಂಡ ಪಕ್ಕಾ ಪ್ಲಾನ್ ರೂಪಿಸಿ ಇದೀಗ ಸಲೀಮ್ ನನ್ನು ಸೆರೆ ಹಿಡಿದಿದೆ. ಈತನನ್ನು ಭಾರತಕ್ಕೆ ಕರೆರಂದು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗುತ್ತದೆ. ಈತನ ಸಹಚರರ ಮೇಲೂ ಅಧಿಕಾರಿಗಳು ನಿಗಾವಹಿಸಿದ್ದು ಅವರ ಪತ್ತೆಗೂ ಪ್ಲಾನ್ ರೂಪಿಸಲಾಗಿದೆ.

Home add -Advt

Related Articles

Back to top button