
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಇನ್ಫೋಸಿಸ್ ಕಂಪನಿಯ ಅಧ್ಯಕ್ಷ ರವಿ ಕುಮಾರ್ ಎಸ್. ಅವರು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಅಕ್ಟೋಬರ್ 11 ರಿಂದ ಜಾರಿಗೆ ಬರುವಂತೆ ಅವರು ಇನ್ಫೋಸಿಸ್ ಆಡಳಿತ ಮಂಡಳಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ಈ ವಿಷಯವನ್ನು ಇನ್ಫೋಸಿಸ್ ಮಂಗಳವಾರ ಪ್ರಕಟಿಸಿದೆ. “ರವಿ ಕುಮಾರ್ ಎಸ್. ಅವರು ಕಂಪನಿಗೆ ನೀಡಿದ ಕೊಡುಗೆಗಳಿಗಾಗಿ, ಸಲ್ಲಿಸಿದ ಸೇವೆಗಳಿಗೆ ತಮ್ಮ ಅಪಾರ ಮೆಚ್ಚುಗೆಯನ್ನು ಇನ್ಫೋಸಿಸ್ ನಿರ್ದೇಶಕರ ಮಂಡಳಿ ಸಲ್ಲಿಸಿದೆ.
ರವಿ ಅವರು ಎಲ್ಲ ಉದ್ಯಮ ವಿಭಾಗಗಳಲ್ಲಿ ಇನ್ಫೋಸಿಸ್ ಗ್ಲೋಬಲ್ ಸರ್ವಿಸಸ್ ಸಂಸ್ಥೆಯನ್ನು ಮುನ್ನಡೆಸಿದ್ದರು.
ಬಿಗ್ ಬಿ 80ನೇ ಹುಟ್ಟು ಹಬ್ಬಕ್ಕೆ ನಮೋ ವಿಶ್