Latest

ಆಪ್ತ ಸಹಾಯಕ ಉಮೇಶ್ ಮನೆ ಮೇಲೆ ಐಟಿ ರೇಡ್; ಬಿಎಸ್ ವೈ ಮೊದಲ ಪ್ರತಿಕ್ರಿಯೆ

ಪ್ರಗತಿವಾಹಿನಿ ಸುದ್ದಿ; ಶಿವಮೊಗ್ಗ: ಆಪ್ತ ಸಹಾಯಕನ ಮನೆ ಮೇಲೆ ಐಟಿ ದಾಳಿ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ತಪ್ಪು ಯಾರೇ ಮಾಡಿದರೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿ ಮಾತನಾಡಿದ ಯಡಿಯೂರಪ್ಪ, ಆಪ್ತ ಉಮೇಶ್ ಮನೆ ಮೇಲೆ ಐಟಿ ದಾಳಿ ವಿಚಾರ ಮಾಧ್ಯಮಗಳಲ್ಲಿ ನೋಡಿ ಗೊತ್ತಾಯಿತು. ಯಾವ ಕಾರಣಕ್ಕೆ ಐಟಿ ದಾಳಿ ನಡೆಯಿತು, ವಾಸ್ತವ ಸಂಗತಿಯೇನು ಗೊತ್ತಿಲ್ಲ. ಮಾಹಿತಿ ಪಡೆದು ಹೇಳುತ್ತೇನೆ ಎಂದರು.

Home add -Advt

ಉಮೇಶ್ ನಾನು ಮುಖ್ಯಮಂತ್ರಿಯಾಗಿದ್ದಾಗಲೂ ಆಪ್ತ ಸಹಾಯಕನಾಗಿ ಕೆಲಸ ಮಾಡುತ್ತಿದ್ದರು, ಈಗ ಬೊಮ್ಮಾಯಿ ಅವಧಿಯಲ್ಲಿಯೂ ಆಪ್ತ ಸಹಾಯಕರಾಗಿದ್ದಾರೆ. ಐಟಿ ಅಧಿಕಾರಿಗಳು ಮಾಹಿತಿ ನೀಡಿದ ಬಳಿಕ ಉತ್ತರ ನೀಡುತ್ತೇನೆ ಎಂದು ಹೇಳಿದರು.

ಇದೇ ವೇಳೆ ಐಟಿ ದಾಳಿ ರಾಜಕೀಯ ಪ್ರೇರಿತ ಎಂಬುದನ್ನು ಅಲ್ಲಗಳೆದ ಯಡಿಯೂರಪ್ಪ, ಉಪಚುನಾವಣೆಗೂ ಐಟಿ ದಾಳಿಗೂ ಯಾವುದೇ ಸಂಬಂಧವಿಲ್ಲ. ಚುನಾವಣೆಯ ಮೇಲೆ ಈ ದಾಳಿ ಯಾವುದೇ ಪರಿಣಾಮ ಬೀರಲ್ಲ. ಐಟಿ ಅಧಿಕಾರಿಗಳು ಸಹಜವಾಗಿ ದಾಳಿ ನಡೆಸುತ್ತಿರುತ್ತಾರೆ. ಅವರ ಕರ್ತವ್ಯ ಅವರು ಮಾಡುತ್ತಿದ್ದಾರೆ ಅಷ್ಟೇ ಎಂದರು.
ಐಟಿ ದಾಳಿಗೆ ನೀರಾವರಿ ನಿಗಮದ ಸಾವಿರಾರು ಕೋಟಿ ಗೋಲ್ ಮಾಲ್ ಕಾರಣ?

Related Articles

Back to top button