ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊಬ್ಬರಿಗೆ ಬೆಂಬಲ ಬೆಲೆ ನಿಗದಿ ಮಾಡಲಾಗಿದ್ದು, ಒಂದು ಕ್ವಿಂಟಾಲ್ ಕೊಬ್ಬರಿಯನ್ನು ರೈತರಿಂದ 11,300 ರೂಗೆ ಖರೀದಿಸುತ್ತೇವೆ ಎಂದು ಸಂಸದೀಯ ವ್ಯವಹಾರ ಸಚಿವ ಜೆ.ಸಿ ಮಾಧುಸ್ವಾಮಿ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮುಖ್ಯ ಕಾರ್ಯದರ್ಶಿಗಳು ಹಾಗೂ ಜಿಲ್ಲಾಧಿಕಾರಿ ಜೊತೆ ಮಾತಾಡಿದ್ದೇನೆ. ಒಣಕೊಬ್ಬರಿ ಬೆಳೆಗಾರರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ರೈತರ ಸಹಾಯಕ್ಕೆ ಸರ್ಕಾರ ಮುಂದಾಗಿದ್ದು, 11,300 ರೂಗೆ ಕ್ವಿಂಟಾಲ್ ಕೊಬ್ಬರಿ ಖರೀದಿಸುವುದಾಗಿ ತಿಳಿಸಿದರು.
ಇದರಿಂದ ಸರ್ಕಾರಕ್ಕೆ 38 ಕೋಟಿ ರೂ.ಹೊರೆಯಾಗುತ್ತದೆ. ಆದರೂ ಖರೀದಿ ಮಾಡುವ ತೀರ್ಮಾನವನ್ನು ಸರ್ಕಾರ ಮಾಡಿದೆ. ಇದರಿಂದ ರೈತರಿಗೆ ಒಂದು ಸಾವಿರ ರೂ ಹೆಚ್ಚಿಗೆ ಸಿಗಲಿದೆ.ಈ ಹಿಂದೆ 10,300ರೂ ಇದ್ದು, ಈಗ 11,300ರೂ ಗೆ ಖರೀದಿ ಮಾಡುತ್ತಿದ್ದೇವೆ. ಈ ಕುರಿತು ಆಯಾ ಭಾಗದಲ್ಲಿರುವ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದ್ದು, ಅಗತ್ಯ ಕ್ರಮಕ್ಕೂ ಆದೇಶಿಸಲಾಗಿದೆ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ