Belagavi NewsBelgaum NewsKannada NewsKarnataka NewsLatest

*ಬೆಳಗಾವಿ: ಜೈನಮುನಿ ಮೃತದೇಹ ಸಾಗಿಸಿದ್ದ ಬೈಕ್ ಜಪ್ತಿ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಜೈನಮುನಿ ಕಾಮಕುಮಾರ ನಂದಿ ಮಹರಾಜರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈನಮುನಿ ಮೃತದೇಹ ಸಾಗಿಸಿದ್ದ ಬೈಕ್ ನ್ನು ಚಿಕ್ಕೋಡಿ ಪೊಲೀಸರು ಜಪ್ತಿ ಮಾಡಿದ್ದಾರೆ.

ಆರೋಪಿಗಳು ಚಿಕ್ಕೋಡಿಯಲ್ಲಿ ಬೈಕ್ ಗೆ ಪೆಟ್ರೋಲ್ ಹಾಕಿಸಿಕೊಂಡು ಬಳಿಕ ಆಶ್ರಮದತ್ತ ಪ್ರಯಾಣ ಮಾಡಿದ್ದರು. ಆಶ್ರಮದಲ್ಲಿ ಮೊದಲು ಜೈನಮುನಿಗಳಿಗೆ ಕರೆಂಟ್ ಶಾಕ್ ಕೊಟ್ಟು ಕೊಲ್ಲಲು ಯತ್ನಿಸಿದ್ದರು. ಬಳಿಕ ಟವೆಲ್ ನಿಂದ ಕುತ್ತಿಗೆ ಬಿಗಿದು ಮುನಿಗಳನ್ನು ಹತ್ಯೆ ಮಾಡಿದ್ದಾರೆ.

Home add -Advt

ಹತ್ಯೆಗೈದು ಚೀಲದಲ್ಲಿ ಮೃತದೇಹ ತುಂಬಿ ಬೈಕ್ ನಲ್ಲಿ ಹೊತ್ತೊಯ್ದಿದ್ದರು. ಜೈನಮುನಿ ಬಳಸುತ್ತಿದ್ದ ಎರಡು ಮೊಬೈಲ್ ಬಿಟ್ಟು ಅವರ ಡೈರಿಯನ್ನು ತೆಗೆದುಕೊಂಡು ಹೋಗಿದ್ದರು. ಇದೀಗ ಜೈನಮುನಿ ಮೃತದೇಹ ಸಾಗಿಸಿದ್ದ ಬೈಕ್ ನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.


Related Articles

Back to top button