
ಪ್ರಗತಿವಾಹಿನಿ ಸುದ್ದಿ: ವಿದೇಶಾಂಗ ಸಚಿವ ಜೈಶಂಕರ್ ಮೇಲೆ ಉಗ್ರರು ದಾಳಿ ನಡೆಸಲು ಯತ್ನಿಸಿರುವ ಘಟನೆ ನಡೆದಿದೆ. ಖಲಿಸ್ತಾನಿ ಉಗ್ರಗಾಮಿಗಳ ಗುಂಪೊಂದು ಸಚಿವರ ಮೇಲೆದಾಳಿಗೆ ಯತ್ನಿಸಿದೆ.
ಪ್ರತಿಭಟನೆ ಹೆಸರಲ್ಲಿ ಭದ್ರತೆ ಉಲ್ಲಂಘನೆ ಮಾಡಿ ಸಚಿವರ ಕಾರಿನ ಕಡೆಗೆ ನುಗ್ಗಿ ದಾಳಿ ನಡೆಸಲು ವ್ಯಕ್ತಿಯೀರ್ವ ಯತ್ನಿಸಿದ್ದಾನೆ. ಭಾರತದ ಧ್ವಜವನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾನೆ.
ಈ ವೇಳೆ ಭದ್ರತಾಪಡೆ ಸಿಬ್ಬಂದಿ, ಪೊಲೀಸರು ಪ್ರತಿಭಟನಾ ನಿರತ ಖಲಿಸ್ತಾನಿಗಳನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ