Kannada NewsLatest

ಜಲ ಜೀವನ್ ಮಿಷನ್ ಯೋಜನೆಯಡಿ – ಹರ್ ಘರ್ ಜಲ್ ಯೋಜನೆ ಜಾರಿ

ಪ್ರಗತಿವಾಹಿನಿ ಸುದ್ದಿ, ನವದೆಹಲಿ –   ಜಲ ಜೀವನ್ ಮಿಷನ್ ಯೋಜನೆಯಡಿ ನಲ್ಲಿ ನೀರಿನ ಸಂಪರ್ಕ (ಹರ್ ಘರ್ ಜಲ್) ಯೋಜನೆ ಜಾರಿ ಬಗ್ಗೆ ನವದೆಹಲಿಯಲ್ಲಿ ನಡೆಯುತ್ತಿರುವ ಸಂಸತ್ ಅಧಿವೇಶನದಲ್ಲಿ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಯವರ ಪ್ರಶ್ನೆಗೆ ಕೇಂದ್ರ ಸರ್ಕಾರದ ಜಲ ಶಕ್ತಿ ರಾಜ್ಯ ಸಚಿವ  ರತನ್‌ಲಾಲ್ ಕಟಾರಿಯಾ ಅವರು ಉತ್ತರಿಸಿದ್ದಾರೆ.

ಜಲ ಜೀವನ್ ಮಿಷನ್ – ಹರ್ ಘರ್ ಜಲ್ ಯೋಜನೆ ೧೫ನೇ ಆಗಸ್ಟ್ ೨೦೧೯ ರಂದು ಘೋಷಣೆಯಾದ ಸಮಯದಲ್ಲಿ ೧೮.೯೩ ಕೋಟಿ ಗ್ರಾಮೀಣ ಕುಟುಂಬಗಳಲ್ಲಿ ಕೇವಲ ೩.೨೩ ಕೋಟಿ ೧೭ ಪ್ರತಿಶತ  ಜನರು ನಲ್ಲಿ ನೀರಿನ ಸಂಪರ್ಕ ಹೊಂದಿದ್ದರು. ಅಂದಿನಿಂದ ೩.೩೩ ಕೋಟಿ ಗ್ರಾಮೀಣ ಕುಟುಂಬಗಳಿಗೆ ನಲ್ಲಿ ನೀರಿನ ಸಂಪರ್ಕವನ್ನು ಒದಗಿಸಲಾಗಿದೆ. ಇಲ್ಲಿಯವರೆಗೆ ದೇಶಾದ್ಯಂತ ೧೯.೧೮ ಕೋಟಿ ಗ್ರಾಮೀಣ ಕುಟುಂಬಗಳಲ್ಲಿ ೬.೬೫ ಕೋಟಿ ೩೪.೨೦ ಪ್ರತಿಶತ (%) ಗ್ರಾಮೀಣ ಜನರು ನಲ್ಲಿ ನೀರು ಸರಬುರಾಜು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈವರೆಗೆ ಕರ್ನಾಟಕದಲ್ಲಿ ೮೯.೬೧ ಲಕ್ಷ ಗ್ರಾಮೀಣ ಕುಟುಂಬಗಳಲ್ಲಿ ೨೬.೧೧ ಲಕ್ಷ ೨೮.೬೩ ಪ್ರತಿಶತ (%) ಜನರು ನಲ್ಲಿ ನೀರನ ಸಂಪರ್ಕ ಹೊಂದಿದ್ದಾರೆ.
ಈ ಯೋಜನೆಗೆ ಬಿಡುಗಡೆಯಾದ ನಿಧಿಯಲ್ಲಿ ರಾಷ್ಟ್ರೀಯ ಕುಡಿಯುವ ನೀರಿನ ಗುಣಮಟ್ಟದ ಉಪ-ಮಿಷನ್ ಅಡಿಯಲ್ಲಿ ಆರ್ಸೆನಿಕ್ ಮತ್ತು ಪ್ಲೋರೈಡ್ ಪೀಡಿತ ಆವಾಸಸ್ಥಾನಗಳಲ್ಲಿ ಕುಡಿಯಲು ಯೋಗ್ಯವಾದ ನೀರನ್ನು ಒದಗಿಸಲಾಗಿದೆ ಹಾಗೂ ಪೀಡಿತ ಜಿಲ್ಲೆಗಳಿಗೆ ಜಪಾನೀಸ್ ಎನ್ಸೆಫಾಲಿಟಿಸ್-ಆಕ್ಯುಟ್ ಎನ್ಸೆಫಾಲಿಟಿಸ್ ಸಿಂಡ್ರೋಮ್ ಕಾರ್ಯಕ್ಷಮತೆ ಪ್ರೋತ್ಸಾಹ ಧನವನ್ನು ಒಳಗೊಂಡಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button