ಪ್ರಗತಿವಾಹಿನಿ ಸುದ್ದಿ, ಜಾಂಬೋಟಿ – ಖಾನಾಪುರ ತಾಲೂಕಿನ ಜಾಂಬೋಟಿ ಗ್ರಾಮದ ವಿದ್ಯಾ ವಿಕಾಸ ಸಮಿತಿ ಹಾಗೂ ಮಾಧ್ಯಮಿಕ ವಿದ್ಯಾಲಯ, ಜಾಂಬೋಟಿ ಶಾಲೆಯ ಕೊಠಡಿಗಳು ಆಗಷ್ಟ್ ೨೦೧೯ರಲ್ಲಿ ಅತೀವೃಷಿಯಿಂದ ಕುಸಿದು, ಸಂಪೂರ್ಣ ಹಾಳಾಗಿದೆ.
ಇದರಿಂದಾಗಿ ಮಕ್ಕಳ ವಿದ್ಯಾಭ್ಯಾಸಕ್ಕೆ ತುಂಬಾ ತೊಂದರೆಯಾಗುತ್ತಿದೆ. ಈಗ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಶಾಲೆಗೆ ೫ ನೂತನ ಕೊಠಡಿಗಳ ನಿರ್ಮಾಣ ಮಾಡಲು ಪ್ರಯೋಜಕತ್ವವನ್ನು ವಹಿಸಿದೆ. ಒಟ್ಟೂ ಸುಮಾರು 50 ಲಕ್ಷ ರೂ. ಯೊಜನೆ ಇದಾಗಿದ್ದು, ಆರ್ ಎಸ್ ಎಸ್ ಪ್ರವಾಹ ಸಂತ್ರಸ್ತರ ನಿಧಿಯಿಂದ 35 ಲಕ್ಷ ರೂ. ನೀಡುತ್ತಿದೆ. ರೋಟರಿ ಕ್ಲಬ್ ಶೌಚಾಲಯ ನಿರ್ಮಿಸಿಕೊಡುವ ಭರವಸೆ ನೀಡಿದೆ.
ನೂತನ ಶಾಲಾ ಕೊಠಡಿಗಳ ನಿರ್ಮಾಣಕ್ಕಾಗಿ ವಿಧಾನ ಪರಿಷತ್ ಸರಕಾರದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಶುಕ್ರವಾರ ಭೂಮಿ ಪೂಜೆಯನ್ನು ನೇರವೇರಿಸಿದರು. ಸರಕಾರದಿಂದ ಅಗತ್ಯ ಮೂಲಸೌಲಭ್ಯಗಳನ್ನು ಒದಗಿಸಿಕೊಡುವುದಾಗಿ ಅವರು ಭರವಸೆ ನೀಡಿದರು.
ಶ್ರೀ ಚಿತ್ತಪ್ರಕಾಶಾನಂದ ಸ್ವಾಮೀಜಿಗಳು ದಿವ್ಯ ಸಾನಿಧ್ಯವನ್ನು ವಹಿಸಿದ್ದರು. ಆರ್.ಎಸ್.ಎಸ್. ಪ್ರಮುಖರಾದ ಖಗೇಶನ್ ಪಟ್ಟಣಶೆಟ್ಟಿ, ಅರವಿಂದರಾವ್ ದೇಶಪಾಂಡೆ, ರಾಘವೇಂದ್ರ ಕಾಗವಾಡ, ಅಶೋಕ ಶಿಂತ್ರೆ ಹಾಗೂ ಗ್ರಾಮ ಪಂಚಾಯತ ಅಧ್ಯಕ್ಷರಾದ ರಾಜಶ್ರೀ ಪರಮೇಕರ, ಹಿರಿಯ ನಾಗರಿಕರಾದ ಶಂಕರ ದೇಸಾಯಿ, ರೋಟರಿ ಕ್ಲಬ್ ಸದಸ್ಯರಾದ ಶರದ ಪೈ, ವಿದ್ಯಾವಿಕಾಸ ಸಮಿತಿಯ ಶ್ರೀಕಾಂತ ಕದಂ, ಚೈತನ್ಯ ಕುಲಕರ್ಣಿ, ಪರಮೇಶ್ವರ ಹೆಗಡೆ, ಕಿರಣ್ ನಿಪ್ಪಾಣಿಕರ್, ಬಿಜೆಪಿ ಮುಖಂಡರುಗಳಾದ ಸಂಜಯ ಕುಬಲ, ಪ್ರಮೋದ ಕೋಚೇರಿ, ಧನಶ್ರೀ ಜಾಂಬೋಟಿಕರ ಮೊದಲಾದವರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ