Karnataka News

*ಶಿವಮೊಗ್ಗ ನಿವಾಸ ತಲುಪಿದ ಮೃತ ಮಂಜುನಾಥ್ ಮೃತದೇಹ*

ಪ್ರಗತಿವಾಹಿನಿ ಸುದ್ದಿ: ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರ ಗುಂಡೇಟಿಗೆ ಬಲಿಯಾದ ಶಿವಮೊಗ್ಗ ಮೂಲದ ಪ್ರವಾಸಿಗ ಮಂಜುನಾಥ್ ಮೃತದೇಹ ಶಿವಮೊಗ್ಗ ನಿವಾಸ ತಲುಪಿದೆ.

ಜಮ್ಮು-ಕಾಶ್ಮೀರದಿಂದ ದೆಹಲಿ, ಅಲ್ಲಿಂದ ಬೆಂಗಳೂರಿಗೆ ಇಂದು ಮುಂಜಾನೆ ಬಂದ ಮಮ್ಜುನಾಥ್ ಮೃತದೇಹವನ್ನು ರಸ್ತೆ ಮಾರ್ಗದ ಮೂಲಕ ಶಿವಮೊಗ್ಗಕ್ಕೆ ಕೊಂಡೊಯ್ಯಲಾಗಿದೆ. ಶಿವಮೊಗ್ಗ ನಗರದ ವಿಜಯನಗರ ಬಡಾವಣೆಯಲ್ಲಿರುವ ಮಂಜುನಾಥ್ ನಿವಾಸಕ್ಕೆ ಮೃತದೇಹ ಬರುತ್ತಿದ್ದಂತೆ ಕುಟುಂಬದವರ, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

ಏ.೧೯ರಂದು ಮಂಜುನಾಥ್ ರಾವ್ ಹಾಗೂ ಪತ್ನಿ ಪಲ್ಲವಿ, ಪುತ್ರ ಅಭಿಜೇಯ ಜಮ್ಮು-ಕಾಶ್ಮೀರಕ್ಕೆ ಪ್ರವಾಸಕ್ಕೆ ತೆರಳಿದ್ದರು. ಏ.೨೧ರಂದು ಕಾಶ್ಮೀರ ಪಹಲ್ಘಾಮ್ ನಲ್ಲಿ ಉಗ್ರರು ಮಂಜುನಾಥ್ ಪತಿ ಹಾಗೂ ಮಗನ ಕಣ್ಮುಂದೆಯೇ ಮಂಜುನಾಥ್ ಅವರನ್ನು ಗುಂಡಿಟ್ಟು ಹತ್ಯೆ ಮಾಡಿತ್ತು. ಉಗ್ರರ ದಾಳಿಯಲ್ಲಿ ಒಟ್ಟು 28 ಪ್ರವಾಸಿಗರು ಬಲಿಯಾಗಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button