World

*ಉಗ್ರರ ದಾಳಿ ಹಿನ್ನೆಲೆ: ಪಾಕಿಸ್ತಾನದೊಂದಿಗೆ ಸಿಂಧುನದಿ ನೀರು ಒಪ್ಪಂದ ಬಂದ್ ಸೇರಿದಂತೆ 5 ಪ್ರಮುಖ ನಿರ್ಧಾರ ಕೈಗೊಂಡ ಭಾರತ*

ಪ್ರಗತಿವಾಹಿನಿ ಸುದ್ದಿ: ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ 28 ಪ್ರವಾಸಿಗರನ್ನು ಹತ್ಯೆಗದ ಪಾಕಿಸ್ತಾನ ಮೂಲದ ಉಗ್ರರ ವಿರುದ್ಧ ಸೇನೆ ಕಾರ್ಯಾಚರಣೆ ಚುರುಕುಗೊಳಿಸಿದೆ. ಈ ನಡುವೆ ಭಾರತ ಸರ್ಕಾರ ಪಾಕಿಸ್ತಾನದ ಬಗ್ಗೆ ಹಲವು ಪ್ರಮುಖ ನಿರ್ಧಾರ, ನಿರ್ಬಂಧವನ್ನು ವಿಧಿಸಿದೆ.

1960ರ ಸಿಂಧೂನದಿ ನೀರು ಒಪ್ಪಂದವನ್ನು ಭಾರತ ಬಂದ್ ಮಾಡಿದೆ. ಅಟ್ಟಾರಿಯಾ-ವಾಘಾ ಚೆಕ್ ಪೋಸ್ಟ್ ನ್ನು ಬಂದ್ ಮಾಡಲಾಗಿದೆ. ೪೮ ಗಂಟೆಯೊಳಗೆ ಭಾರತದಲ್ಲಿರುವ ಪಾಕಿಸ್ತಾನದವರು, ರಾಯಭಾರ ಸಿಬ್ಬಂದಿ, ಅಧಿಕಾರಿಗಳು ದೇಶ ಬಿಟ್ಟು ತೊಲಗುವಂತೆ ಖಡಕ್ ಸೂಚನೆ ನೀಡಿದೆ.

ಮೇ 1ರೊಳಗೆ ಚೆಕ್ ಪೋಸ್ಟ್ ಗಳ ಮೂಲಕ ಬಂದವರು ವಾಪಸ್ ಹೋಗಬೇಕು. SAARC ವೀಸಾ ವಿನಾಯಿತಿಯಡಿ ಪ್ರವೇಶ್ ಬಂದ್. ಪಾಕಿಸ್ತಾನ ಪ್ರಜೆಗಳಿಗೆ ಭಾರತ ಪ್ರವೇಶವನ್ನು ಬಂದ್ ಮಾಡಲಾಗಿದೆಪಾಕಿಸ್ತಾನ ಪ್ರಜೆಗಳಿಗೆ ನೀಡುವ SPES ವೀಸಾ ರದ್ದುಗೊಳಿಸಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button