ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ದೇಶದಲ್ಲಿ ಜವಾದ್ ಚಂಡಮಾರುತ ಭೀತಿ ಎದುರಾಗಿದ್ದು ಮುಂದಿನ 48ಗಂಟೆಗಳಲ್ಲಿ ಆಂಧ್ರಪ್ರದೇಶ, ಒಡಿಶಾ ಕರಾವಳಿ ಭಾಗಕ್ಕೆ ಚಂಡ ಮಾರುತ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಜವಾದ್ ಚಂಡಮಾರುತವುಂತಾಗಲಿದ್ದು, ಡಿಸೆಂಬರ್ 4 ಮತ್ತು 5ರಂದು ಆಂಧ್ರ ಮತ್ತು ಒಡಿಶಾದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗಲಿದೆ. ಪಶ್ಚಿಮ ಬಂಗಾಳದ ಕೋಲ್ಕತ್ತ, ದಕ್ಷಿಣ ಮತ್ತು ಉತ್ತರ 24 ಪರಗಣ ಜಿಲ್ಲೆಗಳು, ಮಿಡ್ನಾಪುರದ ಪೂರ್ವ ಮತ್ತು ಪಶ್ಚಿಮ ಪ್ರದೇಶಗಳು, ಹೂಗ್ಲಿ, ನಾದಿಯಾ ಮತ್ತು ಝಾರ್ಗ್ರಾಮ್ಗಳಲ್ಲಿ ವ್ಯಾಪಕ ಮಳೆಯಾಗಲಿದೆ.
ಜವಾದ್ ಚಂಡಮಾರುತ ಅಪ್ಪಳಿಸುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಸಂಚರಿಸುವ 12 ರೈಲುಗಳ ಸೇವೆಯನ್ನು ರದ್ದು ಮಾಡಲಾಗಿದೆ ಎಂದು ನೈಋತ್ಯ ರೈಲ್ವೆ ವಲಯ ಮಾಹಿತಿ ನೀಡಿದೆ.
ಇಂದಿನಿಂದ ಶನಿವಾರದವರೆಗೆ 12 ರೈಲುಗಳ ಸೇವೆಗಳನ್ನು ರದ್ದುಪಡಿಸಲಾಗಿದೆ.
ಡಿ. 2- ರೈಲು ಸಂಖ್ಯೆ 12509 ಬೆಂಗಳೂರು ಕಂಟೋನ್ಮೆಂಟ್ – ಗುವಾಹಟಿ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್
ಡಿ. 3- ರೈಲು ಸಂಖ್ಯೆ 22883 ಪುರಿ – ಯಶವಂತಪುರ ಗರೀಬ್ ರಥ್ ಎಕ್ಸ್ ಪ್ರೆಸ್
ಡಿ. 3- ರೈಲು ಸಂಖ್ಯೆ 12245 ಹೌರಾ – ಯಶವಂತಪುರ ದುರೊಂತೋ ಎಕ್ಸ್ ಪ್ರೆಸ್
ಡಿ. 3 – ರೈಲು ಸಂಖ್ಯೆ 22817 ಹೌರಾ – ಮೈಸೂರು ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್
ಡಿ. 3 – ರೈಲು ಸಂಖ್ಯೆ 12863 ಹೌರಾ – ಯಶವಂತಪುರ ಎಕ್ಸ್ ಪ್ರೆಸ್
ಡಿ. 3 ರೈಲು ಸಂಖ್ಯೆ 12889 ಟಾಟಾನಗರ – ಯಶವಂತಪುರ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್
ಡಿ. 3 ರೈಲು ಸಂಖ್ಯೆ 12246 ಯಶವಂತಪುರ – ಹೌರಾ ದುರಾಂಟೊ ಎಕ್ಸ್ ಪ್ರೆಸ್ ಸೇವೆ
ಡಿ. 3 ರೈಲು ಸಂಖ್ಯೆ 12246 ಯಶವಂತಪುರ – ಹೌರಾ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್
ಡಿ. 3 ರೈಲು ಸಂಖ್ಯೆ 18048 ವಾಸ್ಕೋ-ಡ-ಗಾಮಾ – ಹೌರಾ ಅಮರಾವತಿ ಎಕ್ಸ್ ಪ್ರೆಸ್
ಡಿ. 3 ರೈಲು ಸಂಖ್ಯೆ 18464 ಕೆಎಸ್ಆರ್ ಬೆಂಗಳೂರು – ಭುವನೇಶ್ವರ ಪ್ರಶಾಂತಿ ಎಕ್ಸ್ ಪ್ರೆಸ್
ಡಿ. 4 ರೈಲು ಸಂಖ್ಯೆ 18463 ಭುವನೇಶ್ವರ – ಕೆಎಸ್ಆರ್ ಬೆಂಗಳೂರು ಪ್ರಶಾಂತಿ ಎಕ್ಸ್ ಪ್ರೆಸ್
ಡಿ. 4 ರೈಲು ಸಂಖ್ಯೆ 18637 ಹಟಿಯಾ – ಬೆಂಗಳೂರು ಕಂಟೋನ್ಮೆಂಟ್ ಎಕ್ಸ್ ಪ್ರೆಸ್ – ಈ 12 ರೈಲು ಸೇವಗಳನ್ನು ರದ್ದುಗೊಳಿಸಲಾಗಿದೆ.
ಬೆಳಗಾವಿ ಅಧಿವೇಶನ ನಡೆಸಲು 3 ಪ್ರಮುಖ ಸವಾಲು – ವಿಶ್ವೇಶ್ವರ ಹೆಗಡೆ ಕಾಗೇರಿ
ಕುಳ್ಳ ದೇವರಾಜ್ ಬಂಧನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ