Kannada NewsKarnataka NewsLatest

*ಜಲ್ಲಿಕ್ರಷರ್ ಯಂತ್ರಕ್ಕೆ ಸಿಲುಕಿ ವ್ಯಕ್ತಿ ದುರ್ಮರಣ*

ಪ್ರಗತಿವಾಹಿನಿ ಸುದ್ದಿ; ಚಿಕ್ಕಬಳ್ಳಾಪುರ: ಜಲ್ಲಿಕ್ರಷರ್ ಯಂತ್ರಕ್ಕೆ ಸಿಲುಕಿ ಕಾರ್ಮಿಕನೊಬ್ಬ ಸಾವನ್ನಪ್ಪಿರುವ ದಾರುಣ ಘಟನೆ ಚಿಕ್ಕಬಳ್ಳಾಪುರದ ಪೇರಸಂದ್ರದಲ್ಲಿ ನಡೆದಿದೆ.

Home add -Advt

20 ವರ್ಷದ ಕಾರ್ತಿಕ್ ಮೃತ ದುರ್ದೈವಿ. ಪೇರಸಂದ್ರ ಬಳಿಯ ಸಂತೋಷ್ ಪಾಟೀಲ್ ಎಂಬುವವರಿಗೆ ಸೇರಿದ ಜಯ್ ಕ್ರಷರ್ ಯಂತ್ರಕ್ಕೆ ಸಿಲುಕಿ ಕಾರ್ಮಿಕ ಯುವಕ ಸಾವನ್ನಪ್ಪಿದ್ದಾನೆ.

ಕೆಲಸ ಮಾಡುವಾಗ ಸುರಕ್ಷಿತ ಕ್ರಮ ಕೈಗೊಳ್ಳದಿರುವುದೇ ದುರಂತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಘಟನಾ ಸ್ಥಳಕ್ಕೆ ಪೇರಸಂದ್ರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related Articles

Back to top button