
ಪ್ರಗತಿವಾಹಿನಿ ಸುದ್ದಿ: 144 ವರ್ಷಗಳ ನಂತರ ವೇದಭೂಮಿ ಸನಾತನ ಧರ್ಮದ ಮಹಾಪರ್ವವಾದ ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಕುಟುಂಬ ಸಮೇತರಾಗಿ ರವಿವಾರ ಪರಮ ಪವಿತ್ರ ಪಾವನೆ ಗಂಗೆ, ಯಮುನಾ ಹಾಗೂ ಸರಸ್ವತಿ ನದಿಗಳ ತ್ರಿವೇಣಿ ಸಂಗಮದಲ್ಲಿ ಜೊಲ್ಲೆ ಗ್ರೂಪ್ ಸಂಸ್ಥಾಪಕ ಹಾಗೂ ಮಾಜಿ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ,ಮಾಜಿ ಸಚಿವೆ ಹಾಗೂ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ, ಜ್ಯೋತಿಪ್ರಸಾದ ಜೊಲ್ಲೆ, ಬಸವಪ್ರಸಾದ ಜೊಲ್ಲೆ, ಪ್ರೀಯಾ ಜೊಲ್ಲೆ ಹಾಗೂ ಯಶಸ್ವಿನಿ ಜೊಲ್ಲೆ ಅವರು ಸ್ನಾನ ಮಾಡಿ ಲೋಕ ಕಲ್ಯಾಣಕ್ಕಾಗಿ ಭಗವಂತನಲ್ಲಿ ಪ್ರಾರ್ಥಿಸಿದರು.
ಲಕ್ಷಾಂತರ ಜನರು ಇದನ್ನು ಪವಿತ್ರ ಆಚರಣೆ ಎಂದು ಪರಿಗಣಿಸಿ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿ,ಧನ್ಯರಾಗುತ್ತಿದ್ದು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಇಚ್ಛಾಶಕ್ತಿ ಹಾಗೂ ಅವರ ಆಡಳಿತ ವೈಖರಿಯಿಂದ ಮಹಾಕುಂಭಮೇಳ ಅತ್ಯಂತ ಯಶಸ್ವಿಯಾಗಿ ಜರುಗುತ್ತಿದೆ. ನಾವು ಕುಟುಂಬ ಸಮೇತ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿ ಧಾನ್ಯರಾದೆವು ಎಂದು ಜೊಲ್ಲೆ ಕುಟುಂಬ ತಿಳಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ