Latest

ರಾಜ್ಯ ಪತ್ರಕರ್ತರ ಸಮ್ಮೇಳನ ಡಿಸೆಂಬರ್ ಗೆ ಮುಂದೂಡಿಕೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ಕಲಬುರಗಿಯಲ್ಲಿ ಇದೇ ನ.27 ಮತ್ತು 28 ರಂದು ನಡೆಯಬೇಕಾಗಿದ್ದ 36ನೇ ರಾಜ್ಯ ಪತ್ರಕರ್ತರ ಸಮ್ಮೇಳನವನ್ನು, ವಿಧಾನ ಪರಿಷತ್ ಚುನಾವಣೆ ನೀತಿ ಸಂಹಿತೆ ಅಡ್ಡಿಯಾಗಿದೆ.

ಸಮ್ಮೇಳನದಲ್ಲಿ ಸಿಎಂ ಭಾಗವಹಿಸಲು ಕೂಡ ಅನುಮತಿ ಪಡೆಯಲೇಬೇಕು ಎನ್ನುವ ಆಯೋಗದ ನಿರ್ದೇಶನ ಹಿನ್ನೆಲೆಯಲ್ಲಿ ಅನುಮತಿ ಕೋರಿ ಚುನಾವಣಾ ಆಯೋಗಕ್ಕೆ ಸರ್ಕಾರ ಪತ್ರ ಬರೆದರೂ ಅನುಮತಿ ಬರುವುದು ತಡವಾಗುತ್ತಿದೆ.

ಚುನಾವಣಾ ಆಯೋಗದ ಅನುಮತಿ ಇಲ್ಲದೆ ಸಿಎಂ ಮತ್ತು ಸಚಿವರು ಸಮ್ಮೇಳನದಲ್ಲಿ ಭಾಗವಹಿಸಲು ಸಾಧ್ಯವಾಗದ ಕಾರಣ, ಸ್ವಾಗತ ಸಮಿತಿ ಕೋರಿಕೆ ಮೇರೆಗೆ ಸಮ್ಮೇಳನವನ್ನು ಡಿಸೆಂಬರ್ ತಿಂಗಳಿಗೆ ಮುಂದೂಡಲಾಗಿದೆ.

ಮುಖ್ಯಮಂತ್ರಿಗಳ ದಿನಾಂಕ ಖಚಿತಪಡಿಸಿಕೊಂಡು ಸಮ್ಮೇಳನ ದಿನವನ್ನು ಶೀಘ್ರವಾಗಿ ತಿಳಿಸಲಾಗುವುದು ಎಂದು ಶಿವಾನಮ್ದ ತಗಡೂರು ತಿಳಿಸಿದ್ದಾರೆ.

Home add -Advt

Related Articles

Back to top button