Kannada NewsKarnataka NewsLatest

ನಿಮ್ಮನೆ ಹೆಣ್ಣು ಮಕ್ಕಳಿಗೆ ಹೀಗಾದರೆ ಸುಮ್ಮನಿರ್ತೀರಾ?; ಗರಂ ಆದ ಸಚಿವ ಈಶ್ವರಪ್ಪ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮತಾಂತರ ನಿಷೇಧ ಮಸೂದೆ ಮಂಡನೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಯಾರನ್ನೂ ಬಲವಂತದಿಂದ ಮತಾಂತರ ಮಾಡಬಾರದು, ಕಾನೂನು ಬದ್ಧವಾಗಿ ಮಾಡಬಹಿದು ಎಂದು ಹೇಳಿದರು.

ಮತಾಂತರ ನಿಷೇಧ ಕಾಯ್ದೆ ವಿರೋಧಿಸುತ್ತಿರುವವರ ವಿರುದ್ಧ ಕಿಡಿಕಾರಿದ ಈಶ್ವರಪ್ಪ, ನಿಮ್ಮ ಮನೆ ಹೆಣ್ಣುಮಕ್ಕಳಿಗೆ ಹೀಗಾದರೆ ಸುಮ್ಮನಿರ್ತೀರಾ? ಎಂದು ಪ್ರಶ್ನಿಸಿದ್ದಾರೆ. ಆಸೆ, ಆಮಿಷವೊಡ್ಡಿ, ಬಡತನ ದುರುಪಯೋಗಪಡಿಸಿಕೊಂಡು ಬಲವಂತದ ಮತಾಂತಕ್ಕೆ ಅವಕಾಶವಿಲ್ಲ ಎಂದರು.

Home add -Advt

ವಿಪಕ್ಷಗಳು ಮತಾಂತರ ನಿಷೇಧ ಕಾಯ್ದೆ ವಿರೋಧಿಸುವುದು ಸರಿಯಲ್ಲ. ಹೆಣ್ಣು ಮಕ್ಕಳನ್ನು ಮತಾಂತರ ಮಾಡಿ ದೇಹ ದುರ್ಬಳಕೆ ಮಾಡಿಕೊಂಡು ಹಾಳು ಮಾಡುತ್ತಿದ್ದಾರೆ. ಇದು ಡಿ.ಕೆ.ಶಿವಕುಮಾರ್ ಅವರಿಗೆ ಗೊತ್ತಿಲ್ಲ. ನಾನು ಡಿಕೆಶಿ ಅವರಿಗೆ ಅಂತಹ ಹೆಣ್ಣುಮಕ್ಕಳ ದುಸ್ಥಿತಿಯನ್ನು ತೋರಿಸ್ತೀನಿ. ಆಸೆ ಆಮಿಷ ಬಲವಂತದ ಮತಾಂತರ ಮಾಡುವಂತಿಲ್ಲ ಹಾಗಾಗಿ ಕಾಯ್ದೆ ಜಾರಿಯಾಗುತ್ತಿದೆ ಎಂದು ತಿಳಿಸಿದರು.
ಡಿಸೆಂಬರ್ 31ಕ್ಕೆ ಕರ್ನಾಟಕ ಬಂದ್

Related Articles

Back to top button