Latest

ಅತ್ಯಾಚಾರ ಮಾಡಿದರೂ ಸುಮ್ಮನಿರಬೇಕೆ?; ಸಚಿವ ಈಶ್ವರಪ್ಪ ಪ್ರಶ್ನೆ

ಪ್ರಗತಿವಾಹಿನಿ ಸುದ್ದಿ; ಶಿವಮೊಗ್ಗ: ಯಾರಾದರೂ ನಮ್ಮ ತಂಟೆಗೆ ಬಂದರೆ ತಿರುಗಿ ಹೊಡೆಯಿರಿ, ಸಹಿಸಿಕೊಂಡು ಸುಮ್ಮನಿರುವ ಕಾಲ ಹೋಯಿತು. ಬಿಜೆಪಿ ಸದೃಢವಾಗಿ ದೇಶಾದ್ಯಂತ ಬೆಳೆದಿದೆ ಎಂಬ ತಮ್ಮ ಹೇಳಿಕೆ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ತಮ್ಮ ಮಾತನ್ನ ಸಮರ್ಥಿಸಿಕೊಂಡಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಸುಮ್ಮನಿರುವ ಕಾಲ ಹೋಯಿತು ಈಗ ಪರಿಸ್ಥಿತಿ ಬದಲಾಗಿದೆ ಎಂದು ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಸಚಿವ ಈಶ್ವರಪ್ಪ, ನನ್ನ ಹೇಳಿಕೆಗೆ ನಾನು ಈಗಲೂ ಬದ್ಧ. ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡ್ತಾರೆ ಸುಮ್ಮನಿರಬೇಕಾ? ಗೋವುಗಳನ್ನು ಕದ್ದು ಹತ್ಯೆ ಮಾಡ್ತಾರೆ ಸುಮ್ಮನಿರಬೇಕಾ? ನಮ್ಮ ಯುವಕರನ್ನು ಹೊಡೆಯುತ್ತಾರೆ ಸುಮ್ಮನಿರಬೇಕಾ? ಸಾಯಿಸುತ್ತಾರೆ ಆಗಲೂ ಸುಮನಿರಬೇಕಾ? ಎಂದು ಪ್ರಶ್ನಿಸಿದರು.

ಒಂದು ಕಾಲದಲ್ಲಿ ನಮಗೆ ಶಕ್ತಿ ಇರಲಿಲ್ಲ, ಆದ್ರೆ ಈಗ ಹಾಗಿಲ್ಲ. ಹೊಡೆದ್ರೆ ಹೊಡೆಸಿಕೊಳ್ಳಿ, ಸಾಯಿಸಿದರೆ ಸುಮ್ಮನಿರಿ ಎಂಬ ಕಾಲ ಹೋಯ್ತು ನಮ್ಮ ತಂಟೆಗೆ ಬಂದರೆ ತಿರುಗಿ ಹೊಡೆಯುವ ಕಾಲವಿದು ಎಂದು ಹೇಳಿದರು.

ಹಿಂದೆ ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ನಡೆದರೂ ಶಾಂತಿಯಿಂದಿರಿ, ಏನೇ ಮಾಡಿದರೂ ಸುಮ್ಮನಿರಿ ಎಂದು ಹಿರಿಯರು ಹೇಳುತ್ತಿದ್ದರು. ಆದರೆ ಈಗ ಪಕ್ಷದ ಸ್ಥಿತಿ ಹಾಗಿಲ್ಲ, ನಾವಾಗೇ ಯಾರ ತಂಟೆಗೂ ಹೋಗಲ್ಲ, ನಮ್ಮ ಮೇಲೆ ಹಲ್ಲೆ ನಡೆಸಿದರೆ ಸುಮ್ಮನಿರಲ್ಲ ಎಂದು ಹೇಳುವ ಮೂಲಕ ಈಶ್ವರಪ್ಪ ಪ್ರಚೋದನಕಾರಿ ಹೇಳಿಕೆ ನೀಡಿದ್ದರು.

ಹಳೆ ಸಚಿವರಿಂದ ಮತ್ತದೇ ಛಾಳಿ; ಮಂತ್ರಿ ಮಂಡಲದ ವಿರುದ್ಧ ಕೆಂಡ ಕಾರಿದ ಕುಮಾರಸ್ವಾಮಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button