*ಬಿಜೆಪಿ ನಾಯಕರ ನಿರೀಕ್ಷೆ ಹುಸಿ; ನಾಮಪತ್ರ ಹಿಂಪಡೆಯದೇ ಕಮಲ ನಾಯಕರಿಗೆ ಸೆಡ್ದುಹೊಡೆದ ಕೆ.ಎಸ್.ಈಶ್ವರಪ್ಪ*
ಪ್ರಗತಿವಾಹಿನಿ ಸುದ್ದಿ: ಪುತ್ರ ಕಾಂತೇಶ್ ಗೆ ಲೋಕಸಭಾ ಬಿಜೆಪಿ ಟಿಕೆಟ್ ಕೈತಪ್ಪಿದ್ದಕ್ಕೆ ಬಿಜೆಪಿ ವಿರುದ್ಧವೇ ಬಂದಾಯವೆದ್ದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಶಿವಮೊಗ್ಗ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.
ಕೊನೇ ಕ್ಶಣದವರೆಗೂ ಬಿಜೆಪಿ ನಾಯಕರು ಇಶ್ವರಪ್ಪ ಮನವೊಲಿಕೆಗೆ ಯತ್ನಿಸಿದ್ದರು. ಆದರೆ ಈಶ್ವರಪ್ಪ ಯಾವುದೇ ಕಾರನಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಖಡಕ್ ಆಗಿ ತಿಳಿಸಿದ್ದರು. ಇಂದು ನಾಮಪತ್ರ ಹಿಂಪಡೆಯಲು ಕೊನೇ ದಿನವಾಗಿತ್ತು. ಕೊನೇ ಕ್ಷಣದಲ್ಲಿ ಈಶ್ವರಪ್ಪ ಸ್ಪರ್ಧೆಯಿಂದ ಹಿಂದೆಸರಿಯಬಹುದು, ನಾಮಪತ್ರ ಹಿಂಪಡೆಯಬಹುದು ಎಂದು ಬಿಜೆಪಿ ನಿರೀಕ್ಷೆಯಲ್ಲಿತ್ತು. ಈಗ ಬಿಜೆಪಿ ನಾಯಕರ ಆಸೆ ಹುಸಿಯಾಗಿದೆ. ಈಶ್ವರಪ್ಪ ನಾಮಪತ್ರ ಹಿಂಪಡೆದಿಲ್ಲ.
ಅಲ್ಲದೇ ಚುನಾವಣಾ ಆಯೋಗ ಕೂಡ ಕೆ.ಎಸ್.ಈಶ್ವರಪ್ಪಗೆ ‘ಕಬ್ಬಿನ ಜೊತೆ ಇರುವ ರೈತ’ನ ಚಿಹ್ನೆಯನ್ನು ಗುರುತಾಗಿ ನೀಡಿದೆ. ಈ ಮೂಲಕ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಈಶ್ವರಪ್ಪ ಸ್ಪರ್ಧೆ ಖಚಿತವಾಗಿದೆ. ಇದು ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರಿಗೆ ಬೀಳಲಿರುವ ವೋಟಿನ ಮೇಲೆ ಭಾರಿ ಪರಿಣಾಮ ಬೀರುವ ಸಾಧ್ಯತೆ ಇದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ