Politics

*ಮಾನ ಮಾರ್ಯಾದೆ ಇದ್ರೆ ಕುರ್ಚಿಯಿಂದ ಕಳೆಗೆ ಇಳಿಯಿರಿ: ಆರ್ ಅಶೋಕ್*

ಪ್ರಗತಿವಾಹಿನಿ ಸುದ್ದಿ: ಸರ್ಕಾರಕ್ಕೆ ಮಾನ ಮರ್ಯಾದೆ ಇದ್ರೆ, ಕುರ್ಚಿ ಜಗಳ ಬಿಟ್ಟು ಅಧಿಕಾರದ ಆಸೆ ಬಿಟ್ಟು ಕಾನೂನು ಸುವ್ಯವಸ್ಥೆ ಕಾಪಾಡಲಿ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರ ಒಳ ಜಗಳ ಹೆಚ್ಚುತ್ತಿದೆ. ಹೇಳೋರು, ಕೇಳೋರು ಇಲ್ಲದಂತಾಗಿದೆ. ಅಧಿಕಾರಿಗಳು ಯಾರು ಸಿಎಂ ಆಗ್ತಾರೆ, ಅವರಿಗೆ ಸೆಲ್ಯೂಟ್ ಹೊಡೆಯೋಣ ಅಂತ ಕಾಯ್ತಿದ್ದಾರೆ. ಇದರಿಂದ ರಾಜ್ಯದ ಜನರು ತಬ್ಬಲಿಯಾಗಿದ್ದಾರೆ. ಕರ್ನಾಟಕ ಕಾನೂನು ಸುವ್ಯವಸ್ಥೆಯನ್ನು ಪ್ರಪಾತಕ್ಕೆ ದೂಡಿದ್ದಾರೆ. ಸ್ವಜನ ಪಕ್ಷಪಾತ, ಟ್ರಾನ್ಸ್‌ಫರ್ ದಂಧೆ ಆಗಿದೆ. ಸರ್ಕಾರಕ್ಕೆ ಮಾನ ಮರ್ಯಾದೆ ಇದ್ರೆ, ಕುರ್ಚಿ ಜಗಳ ಬಿಟ್ಟು, ಅಧಿಕಾರ ಆಸೆ ಬಿಟ್ಟು ಕಾನೂನು ಸುವ್ಯವಸ್ಥೆ ಕಾಪಾಡಲಿ. ಇಲ್ಲದಿದ್ರೆ ಎಲ್ಲಾ ಹೂಡಿಕೆದಾರರು ವಾಪಸ್ ಹೋಗ್ತಾರೆ. ಬಿಹಾರಕ್ಕೆ ಮೊದಲು ಯಾಕೆ ಯಾರೂ ಹೂಡಿಕೆ ಹೋಗ್ತಿರಲಿಲ್ಲ.? ಅಲ್ಲಿ ದರೋಡೆ ಹೆಚ್ಚು ಅಂತ. ಕರ್ನಾಟಕ ಹೂಡಿಕೆದಾರರ ಸ್ವರ್ಗ. ಅದನ್ನು ಹಾಳು ಮಾಡುವ ಕೆಲಸ ಮಾಡಬೇಡಿ ಎಂದರು.

ದರೋಡೆ ರಾಜ್ಯಕ್ಕೆ ನಿಮ್ಮೆಲ್ಲರಿಗೂ ಸ್ವಾಗತ ಮಾಡ್ತೀನಿ. ಕರ್ನಾಟಕ ಲಾಲು ಪ್ರಸಾದ್ ಯಾದವ್ ಅವರ ಬಿಹಾರದ ರಾಜ್ಯದ ರೀತಿ ಆಗಿದೆ. ಕರ್ನಾಟಕ ಬಿಹಾರದ ರೀತಿಯ ದರೋಡೆ ರಾಜ್ಯವಾಗಿದೆ. ಮಂಗಳೂರಿನಲ್ಲಿ ದರೋಡೆ ನಡೆದಿದೆ. 5 ನಿಮಿಷದಲ್ಲಿ 15ಕೋಟಿ ಲೂಟಿ ಆಗಿದೆ. ಇದು ಹಾಲಿವುಡ್, ಬಾಲಿವುಡ್ ಅಲ್ಲ, ಸ್ಯಾಂಡಲ್ ವುಡ್ ಸಿನಿಮಾ. ಐದು ನಿಮಿಷದಲ್ಲಿ ಲೂಟಿ ಹೊಡೆದು ದರೋಡೆ ಮಾಡಿ ಪರಾರಿಯಾಗಿದ್ದಾರೆ. ಸಿಎಂ ಹೋಗ್ತಾರೆ ಅಂತ ಗೊತ್ತಿದ್ದು ಲೂಟಿ ಹೊಡೆದಿದ್ದಾರೆ. ಕರ್ನಾಟಕದ ಪೊಲೀಸರ ಮೇಲೆ ಎಷ್ಟು ಭಯ ಇದೆ. ಪಟಾ ಪಟ್ ಅಂತ ನಿಮ್ಮ ಅಕೌಂಟಿಗೆ ಹಣ ಹೋಗುತ್ತೆ ಅಂತ ಹೇಳಿದ್ರು. ಅದೇ ರೀತಿ ಪಟಾ ಪಟ್ ಅಂತ ಲೂಟಿ ಹೊಡೆದಿದ್ದಾರೆ. ರಾಜ್ಯದಲ್ಲಿ ಮುಖ್ಯಮಂತ್ರಿಗಳಿಗೆ ಅಧಿಕಾರಿಗಳ ಮೇಲೆ ಹಿಡಿತ ಇದೆ ಅಂತ ಕೈಗನ್ನಡಿ ಇದೆ. ನನಗೆ ಸಿದ್ದರಾಮಯ್ಯ ಅವರ ಮೇಲೆ ಕರುಣೆ ಇದೆ. ಪೊಲೀಸರನ್ನು ಕರೆಸಿ ನೀವೆಲ್ಲಾ ಇದ್ದು ಹೀಗಾಗಿದೆಯಲ್ಲಪ್ಪಾ ಅಂತ ಕೇಳಿದ್ದಾರೆ. ಸಿದ್ದರಾಮಯ್ಯ ಅಸಹಾಯಕ ಮುಖ್ಯಮಂತ್ರಿ ಆಗಿದ್ದಾರೆ ಎಂದು ಹೇಳಿದರು.

ಅದೇ ರೀತಿ ಬೀದರ್‌ನಲ್ಲಿಯೂ ಹಾಡುಹಗಲೇ ದರೋಡೆ ಆಗಿದೆ. ಎಲ್ಲರೂ ರೋಡಲ್ಲಿ ಬ್ಯುಸಿಯಾಗಿರೋ ಸಂಧರ್ಭದಲ್ಲಿ ಎಟಿಎಂಗೆ ಹಣ ಹಾಕಲು ಹೋಗ್ತಿದ್ದ ಸಿಬ್ಬಂದಿ ಮೇಲೆ ಗುಂಡು ಹೊಡೆದಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಮೇಲೆ ಕಿಂಚಿತ್ತಾದ್ರೂ ಬೆಲೆ ಇದೆಯಾ.? ಹಾಡು ಹಗಲೇ ದರೋಡೆ ಮಾಡ್ತಾರೆ. ದರೋಡೆಕೋರಿಗೆ ಸ್ವರ್ಗದ ಸರ್ಕಾರ ಆಗಿದೆ. ಈವರೆಗೂ ಕರ್ನಾಟಕದವರು ದರೋಡೆ ಮಾಡ್ತಿದ್ರು. ಈಗ ಹೊರ ರಾಜ್ಯದಿಂದ ಬಂದು ಲೂಟಿ ಮಾಡ್ತಿದ್ದಾರೆ. ಬಂದವರು ವಿಮಾನ, ರೈಲಲ್ಲಿ ವಾಪಸ್ ಹೋಗ್ತಿದ್ದಾರೆ. ಕರ್ನಾಟಕದಲ್ಲಿ ಗೃಹಸಚಿವರು ಇದ್ದಾರಾ ಇಲ್ಲವಾ? ಹಿಂದೆ ಎಲ್ಲರೂ ಬ್ಯಾಂಕಿಗೆ ಹೋಗಿ ಹಣ ಡ್ರಾ ಮಾಡ್ತಿದ್ರು. ಈಗ ಬ್ಯಾಂಕಿಗೆ ಹೋಗಲು ಹೆದರುವಂತಾಗಿದೆ. ಕರ್ನಾಟಕದಲ್ಲಿ ದರೋಡೆಕೋರರ ಜಾತ್ರೆ ನಡೆಯುತ್ತಿದೆ. ರೌಡಿಗಳ ಹಟ್ಟಹಾಸ ನಡೆಯುತ್ತಿದೆ. ಪೊಲೀಸರ ಬಳಿ ಸರಿಯಾದ ವೆಪನ್ಸ್‌ ಇಲ್ಲ. ಆದ್ರೆ ದರೋಡೆಕೋರರ ಬಳಿ ಎಲ್ಲಾ ಹೊಸ ಇಕ್ಯೂಪ್‌ಮೆಂಟ್ಸ್ ಇದೆ. ಪೊಲೀಸರ ಬಳಿ ಗನ್ ಇಲ್ಲ ಇದ್ರೆ ಬುಲೆಟ್ ಇಲ್ಲ. ಈವರೆಗೂ ಯಾರನ್ನೂ ಬಂದಿಸಿಲ್ಲ ಎಂದು ವಾಗ್ದಾಳಿ ನಡೆಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button