Latest

ಕಾಳಿ ಮಾತೆಯ ಬಗ್ಗೆ ಅವಹೇಳನಕಾರಿ ಪೋಸ್ಟರ್; ನಿರ್ದೇಶಕಿ ಲೀನಾ ಮಣಿ ಮೇಕಳೈ ವಿರುದ್ಧ ಆಕ್ರೋಶ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಹಿಂದೂ ದೇವತೆ ಬಗ್ಗೆ ಅವಹೇಳನಕಾರಿ ಪೋಸ್ಟರ್ ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ನಿರ್ದೇಶಕಿ ಲೀನಾ ಮಣಿ ಮೇಕಳೈ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ.

ನಿರ್ದೇಶಕಿ ಮಣಿ ಮೇಕಳೈ ‘ಕಾಳಿ’ ಎಂಬ ಡಾಕ್ಯೂಮೆಂಟರಿಯನ್ನು ಬಿಡುಗಡೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸಿದ್ಧತೆ ನಡೆಸಿದ್ದು, ಈ ಕುರಿತು ಪೋಸ್ಟರ್ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಕಾಳಿ ಪೋಸ್ಟರ್ ಬಿಡಿಗಡೆಯಾಗುತ್ತಿದ್ದಂತೆ ಲೀನಾ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಕಾಳಿ ಮಾತೆ ಸಿಗರೇಟ್ ಸೇದುತ್ತಿರುವ ರೀತಿಯಲ್ಲಿ ಪೋಸ್ಟರ್ ಬಿಡುಗಡೆ ಮಾಡಲಾಗಿದ್ದು, ಹಿಂದೂ ದೇವತೆ ಬಗ್ಗೆ ಲೀನಾ ಮಣಿ ಮೇಕಳೈ ಅವಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗಿದೆ.

ಧಾರ್ಮಿಕ ಭಾವನೆಗಳಿಗೆ ಲೀನಾ ಮಣಿ ಮೇಕಳೈ ಧಕ್ಕೆಯುಂಟು ಮಾಡಿದ್ದು, ತಕ್ಷಣ ನಿರ್ದೇಶಕಿಯನ್ನು ಬಂಧಿಸಿ ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಒತ್ತಾಯ ಕೇಳಿಬಂದಿದೆ.
ಭೀಕರ ಅಪಘಾತ; ಶಾಲಾ ಮಕ್ಕಳು ಸೇರಿ 16 ಜನರು ದುರ್ಮರಣ

Home add -Advt

Related Articles

Back to top button