Latest

*ವಿಶ್ವವಿದ್ಯಾಲಯದಲ್ಲಿ RSS ಸಮವಸ್ತ್ರದಲ್ಲಿ ಪ್ರಾಧ್ಯಾಪಕರು; ಫೋಟೋ ವೈರಲ್*

ಪ್ರಗತಿವಾಹಿನಿ ಸುದ್ದಿ; ಕಲಬುರಗಿ: ವಿಶ್ವವಿದ್ಯಾಲಯದ ಮೂವರು ಪ್ರಾಧ್ಯಾಪಕರು ಆರ್ ಎಸ್ ಎಸ್ ಸಮವಸ್ತ್ರದಲ್ಲಿ ವಿಶ್ವವಿದ್ಯಾಲಯದಲ್ಲಿ ಕಾಣಿಸಿಕೊಂಡಿದ್ದು ಆಕ್ರೋಶಕ್ಕೆ ಕಾರಣವಾಗಿದೆ.

ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಮೂವರು ಸಹಾಯಕ ಪ್ರಾಧ್ಯಾಪಕರು ಆರ್ ಎಸ್ ಎಸ್ ಗಣವೇಷಧಾರಿಗಳಾಗಿ ವಿಶ್ವವಿದ್ಯಾಲಯದ ಆವರಣದಲ್ಲಿ ಫೋಟೋಗೆ ಪೋಸ್ ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ವಿದ್ಯಾರ್ಥಿಯೊಬ್ಬರ ಜತೆ ಸಹಾಯಕ ಪ್ರಾಧ್ಯಾಪಕರಾದ ಡಾ.ಅಲೋಕ್ ಕುಮಾರ್ ಗೌರವ್, ಮನಶಾಸ್ತ್ರದ ವಿಭಾಗದ ಡಾ.ವಿಜಯೇಂದ್ರ ಪಾಂಡೆ ಮತ್ತು ಜೀವ ವಿಜ್ಞಾನ ವಿಭಾಗದ ಡಾ.ರಾಕೇಶ್ ಕುಮಾರ್ ಆರ್ ಎಸ್ ಎಸ್ ಗಣವೇಷಧಾರಿಗಳಾಗಿ, ಕೈಯಲ್ಲಿ ಲಾಠಿ ಹಿಡಿದು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

ವಿಶ್ವವಿದ್ಯಾಲಯದ ಗಮನಕ್ಕೆ ತರದೇ ಬೋಧನೆ ಮತ್ತು ಸಂಶೋಧನೆಗೆ ಹೊರತುಪಡಿಸಿ ಇತರೆ ಚಟುವಟಿಕೆಗಳಲ್ಲಿ ಬೋಧಕ ವರ್ಗವು ತೊಡಗಬಾರದು ಮತ್ತು ವಿಶ್ವ ವಿದ್ಯಾಲಯದ ನೌಕರರು ಯಾವ ಸಂಘಟನೆ ಜೊತೆಯೂ ಗುರುತಿಸಿಕೊಳ್ಳಬಾರದು ಎಂಬ ನಿಯಮವಿದೆ. ಅದಾಗ್ಯೂ ಪ್ರಾಧ್ಯಾಪಕರು ಆರ್ ಎಸ್ ಎಸ್ ಸಮವಸ್ತ್ರದಲ್ಲಿ ಕಾಣಿಸಿಕೊಂಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ವಿಶ್ವ ವಿದ್ಯಾಲಯದ ಕುಲಸಚಿವ ಡಾ. ಬಸವರಾಜ ಡೋಣುರ ತಿಳಿಸಿದ್ದಾರೆ.

Home add -Advt

*ಯತ್ನಾಳ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಸಚಿವ ನಿರಾಣಿ*

https://pragati.taskdun.com/murugesh-niranibasanagowda-patil-yatnalpanchamasali-reservationvijayapura/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button