ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯೋತ್ಸವದ ಹೆಸರಲ್ಲಿ ಅಬಕಾರಿ ಇಲಾಖೆ ಅಕ್ರಮವಾಗಿ ಹಣ ಮಾಡುವ ಧಾವಂತಕ್ಕೆ ಇಳಿದಿದೆ. ಬಾರ್, ಪಬ್ ಗಳಿಗೆ ಕನ್ನಡಾಂಬೆ ತಾಯಿ ಭುವನೇಶ್ವರಿ ಫೋಟೋಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡಲಾಗಿದೆ. ಈ ಮೂಲಕ ತಾಯಿ ಭುವನೇಶ್ವರಿಗೆ ಅವಮಾನ ಮಾಡಲಾಗಿದೆ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ.
ಅಬಕಾರಿ ಇಲಾಖೆ ಅಧಿಕಾರಿಗಳು ತಾಯಿ ಭುವನೇಶ್ವರಿ ಫೋಟೋಗಳನ್ನು ಬಾರ್, ಪಬ್ ಗಳಿಗೆ ದುಬಾರಿ ಬೆಲೆಗೆ ಮಾರಾಟ ಮಾಡಿದ್ದಾರೆ. ಒಂದು ಫೋಟೋಕ್ಕೆ 5000 ರೂಪಾಯಿವರೆಗೂ ಹಣಪಡೆದಿದ್ದಾರೆ. ಫೋಟೋದಲ್ಲಿರುವ ಕನ್ನಡಾಂಬೆ ಕೈಯಲ್ಲಿ ಕನ್ನಡ ಬಾವುಟದ ಬದಲು ಬೇರೊಂದು ಬಾವುಟ ಕೂಡ ಇಟ್ಟಿರುವುದು ಆಕ್ಷೇಪಾರ್ಹವಾಗಿದೆ.
ಇನ್ನೊಂದು ವಿಚಾರವೆಂದರೆ ಭುವನೇಶ್ವರಿ ಫೋಟೋ ಮೇಲೆ ಕನ್ನಡ ಸಾಹಿತ್ಯ ಪರಿಷತ್ ಚಿಹ್ನೆಯೂ ಇದೆ. ಅಬಕಾರಿ ಇಲಾಖೆ ಈರೀತಿ ಭುವನೇಶ್ವರಿಗೆ ಅವಮಾನ ಮಾಡುವ ಕೆಲಸಕ್ಕೆ ಹೊರಟಿದೆ. ಕನ್ನಡ ರಾಜ್ಯೋತ್ಸವ ಸಂದರ್ಭವನ್ನೇ ಬಂಡವಾಳ ಮಾಡಿಕೊಂಡು ಹಣ ಮಾಡಲು ಹೊರಟಿವೆ ಎಂದು ಸಾರ್ವಜನಿಕರು ಹಾಗೂ ಕೆಲ ಬಾರ್ ಅಂಗಡಿ ಮಾಲೀಕರೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯ ಇಂಡಿಯನ್ ಕರಾಟೆ ಕ್ಲಬ್; ಸ್ವಯಂ ರಕ್ಷಣೆ ಕುರಿತು ಜಾಗೃತಿ ಪ್ರಾತ್ಯಕ್ಷಿಕೆ
https://pragati.taskdun.com/latest/belagaviindian-karate-clubswayam-rakshane-tarabeti/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ