ಪ್ರಗತಿವಾಹಿನಿ ಸುದ್ದಿ, ಖಾನಾಪುರ – ಬುಧವಾರ ಮಹಾತ್ಮಾ ಗಾಂಧಿ ಜನ್ಮ ದಿನದ ಎಲ್ಲೆಡೆ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಹಲವೆಡೆ ಜನಪ್ರತಿನಿಧಿಗಳೂ ಸ್ವಚ್ಛತೆ ಕಾರ್ಯದಲ್ಲಿ ತೊಡಗಿದ್ದರು.
ಖಾನಾಪುರ ತಾಲೂಕನ ಹಲಕರ್ಣಿಯಲ್ಲಿ ನಡೆದ ಸ್ವಚ್ಛತಾ ಅಭಿಯಾನದಲ್ಲಿ ಶಾಸಕಿ ಅಂಜಲಿ ನಿಂಬಾಳಕರ್ ಭಾಗವಹಿಸಿ ಸ್ವತಃ ಸಲಾಕೆ ಹಿಡಿದು ಕಸ ಎತ್ತಿದರು. ಗ್ರಾಮದ ಮುಖಂಡರು, ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸಿದ್ದರು.