Karnataka NewsPolitics

*ಸಿ.ಟಿ ರವಿಗೆ ಸಂಕಷ್ಟ: ಧ್ವನಿ ಮಾದರಿ ನೀಡಲು ಹೈ ಕೋರ್ಟ್ ಸೂಚನೆ*

ಪ್ರಗತಿವಾಹಿನಿ ಸುದ್ದಿ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ವಿರುದ್ಧ ಬಿಜೆಪಿಯ ಎಂಎಲ್‌ಸಿ ಸಿ.ಟಿ ರವಿ ಅವರು ಪರಿಷತ್‌ನಲ್ಲಿ ಅವಾಚ್ಯ ಪದ ಬಳಕೆ ಮಾಡಿರುವ ಪ್ರಕರಣ ಸಂಬಂಧ ರವಿ ಅವರಿಗೆ ಸಂಕಷ್ಟ ಎದುರಾಗಿದೆ.

ರವಿ ಅವರು ತಮ್ಮ ಧ್ವನಿ ಮಾದರಿ ನೀಡಲು ನಿರಾಕರಿಸುತ್ತಿದ್ದು ತನಿಖೆಗೆ ಸಹಕರಿಸುತ್ತಿಲ್ಲ ಎಂದು ಆರೋಪಿಸಿ ಹೈಕೋರ್ಟ್‌ಗೆ ಸಿಐಡಿ ಅಧಿಕಾರಿಗಳು ಅರ್ಜಿ ಸಲ್ಲಿಸಿರುವ ಕುರಿತು ವಿಚಾರಣೆ ನಡೆಸಿರುವ ಕೋರ್ಟ್, ರವಿ ಅವರಿಗೆ ಇಂದೇ ಕೋರ್ಟ್ ಸೂಚನೆಯನ್ನು ತಲುಪಿಸಿ. ಇಂದೇ ವಾಯ್ಸ್ ಮಾದರಿ ಕೊಡಬೇಕು ಎಂದು ರವಿ ಪರ ವಕೀಲರಿಗೆ ಜಡ್ಜ್ ಆದೇಶ ನೀಡಿದ್ದಾರೆ.

Home add -Advt

ವಾಯ್ಸ್ ಸ್ಯಾಂಪಲ್ ನೀಡುವಂತೆ ಈಗಾಗಲೇ ಸಿಐಡಿ ಅಧಿಕಾರಿಗಳು ಎರಡು ಬಾರಿ ಸಿ.ಟಿ.ರವಿ ಅವರಿಗೆ ನೋಟಿಸ್‌ ನೀಡಿದ್ದರು ಎಂದು ತಿಳಿದುಬಂದಿದೆ. ಇನ್ನು ಪರಿಷತ್‌ನಲ್ಲಿ ಸಿ.ಟಿ ರವಿ ಒಮ್ಮೆ ಅವಾಚ್ಯ ಶಬ್ದ ಬಳಸಿರುವುದು ವಿಡಿಯೋದಲ್ಲಿ ದೃಢವಾಗಿದೆ ಎಂದು ಸಿಐಡಿಯ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎನ್ನಲಾಗಿದೆ.

Related Articles

Back to top button