ಕರ್ನಾಟಕ – ಮಹಾರಾಷ್ಟ್ರ ಉನ್ನತ ಮಟ್ಟದ ಸಭೆ ಆರಂಭ: ಉಭಯ ರಾಜ್ಯಗಳಲ್ಲಿ ಕುತೂಹಲ
November 4, 2022
Less than a minute
ಪ್ರಗತಿವಾಹಿನಿ ಸುದ್ದಿ, ಕೊಲ್ಲಾಪುರ –
ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳ ಗಡಿಭಾಗದ ಜಿಲ್ಲೆಗಳ ವಿವಿಧ ವಿಷಯಗಳ ಕುರಿತು ಉಭಯ ರಾಜ್ಯಗಳ ರಾಜ್ಯಪಾಲರ ನೇತೃತ್ವದಲ್ಲಿ ಶುಕ್ರವಾರ ಕೊಲ್ಹಾಪುರದ ರೆಸಿಡೆನ್ಸಿ ಕ್ಲಬ್ ಸಭಾಂಗಣದಲ್ಲಿ ಸಭೆ ಆರಂಭಗೊಂಡಿದೆ.
ಕರ್ನಾಟಕ ರಾಜ್ಯದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಮಹಾರಾಷ್ಟ್ರದ ರಾಜ್ಯಪಾಲರಾದ ಭಗತ್ ಸಿಂಗ್ ಕೊಶ್ಯಾರಿ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳ ಗಡಿಭಾಗದ ಜಿಲ್ಲೆಗಳ ವಿವಿಧ ವಿಷಯಗಳ ಕುರಿತು ಉಭಯ ರಾಜ್ಯಗಳ ರಾಜ್ಯಪಾಲರ ನೇತೃತ್ವದಲ್ಲಿ ನಡೆಯಲಿರುವ ಅಧಿಕಾರಿಗಳ ಸಭೆಗಾಗಿ ಶುಕ್ರವಾರ ಕೊಲ್ಹಾಪುರಕ್ಕೆ ತೆರಳಿದ ಕರ್ನಾಟಕ ರಾಜ್ಯದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಮಹಾರಾಷ್ಟ್ರದ ರಾಜ್ಯಪಾಲರಾದ ಭಗತ್ ಸಿಂಗ್ ಕೊಶ್ಯಾರಿ ಅವರು ಆತ್ಮೀಯವಾಗಿ ಬರಮಾಡಿಕೊಂಡರು.
ಇದಕ್ಕೂ ಮೊದಲು ಕರ್ನಾಟಕ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ದಂಪತಿ ಮಹಾರಾಷ್ಟ್ರದ ಕೊಲ್ಹಾಪುರದ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದುಕೊಂಡರು. ಈ ಸಂದರ್ಭದಲ್ಲಿ ದೇವಸ್ಥಾನದ ವತಿಯಿಂದ ದಂಪತಿಯನ್ನು ಸನ್ಮಾನಿಸಲಾಯಿತು.