Belagavi NewsBelgaum NewsKannada NewsKarnataka NewsLatest

*ಡಾ ಕೋರೆ ನಿವಾಸಕ್ಕೆ ಕೇರಳ ರಾಜ್ಯಪಾಲರು ಭೇಟಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕೇರಳ ರಾಜ್ಯದ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರಳೇಕರ್ ಅವರು ಭಾನುವಾರ ಕೆಎಲ್ಇ ಕಾರ್ಯಧ್ಯಕ್ಷರಾದ ಡಾ. ಪ್ರಭಾಕರ್ ಕೋರೆಯವರ ಮನೆಗೆ ಆಗಮಿಸಿ ಕುಶಲೋಪಹರಿ ವಿಚಾರಿಸಿದರು.

ಈ ಸಂದರ್ಭದಲ್ಲಿ  ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಕೆಎಲ್ಇ ಸಂಸ್ಥೆಯ ಸಾಧನೆ, ಅಭಿವೃದ್ಧಿ, ಪ್ರಸ್ತುತ ಆರೋಗ್ಯ ಸೇವೆಯ ಕೊಡುಗೆಗಳ ಕುರಿತು ಹಲವಾರು ವಿಚಾರಗಳನ್ನು ವಿನಿಮಯ ಮಾಡಿಕೊಂಡರು. ಡಾ ಪ್ರಭಾಕರ್ ಕೋರೆ ಅವರು ಕಳೆದ ನಾಲ್ಕು ದಶಕಗಳಿಂದ ಕೆ ಎಲ್ ಈ ಸಂಸ್ಥೆಯನ್ನು ಅಗಾಧವಾಗಿ ಕಟ್ಟಿ ಬೆಳೆಸಿರುವುದನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಶ್ರೀಮತಿ ಅನಘಾ ಅರಳೆೇಕರ್, ಪ್ರಸನ್ನ ಗೋಟಗೆ ಮತ್ತು ಇತರರು ಉಪಸ್ಥಿತರಿದ್ದರು.

Home add -Advt

Related Articles

Back to top button