Belagavi NewsBelgaum NewsKarnataka NewsLatestNationalPolitics

*ಕೇರಳದಲ್ಲಿ ‘ವಾಕ್ ಫಾರ್ ಮಹೆ’ ಪಾದಯಾತ್ರೆಯಲ್ಲಿ ಡಾ. ಅಂಜಲಿ ನಿಂಬಾಳ್ಕರ್ ಭಾಗಿ*

ಕಣ್ಣೂರಿನಲ್ಲಿ ನಡೆದ ಪಾದಯಾತ್ರೆ

ಪ್ರಗತಿವಾಹಿನಿ ಸುದ್ದಿ: ಪುದುಚೇರಿ: ಖಾನಾಪುರದ ಮಾಜಿ ಶಾಸಕಿ ಹಾಗೂ ಎಐಸಿಸಿ ಕಾರ್ಯದರ್ಶಿ ಡಾ. ಅಂಜಲಿ ನಿಂಬಾಳ್ಕರ್ ಅವರು ಕಣ್ಣೂರುನಲ್ಲಿ ಐಎನ್‌ಸಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪುದುಚೇರಿ ಮತ್ತು ಬ್ಲಾಕ್ ಕಾಂಗ್ರೆಸ್ ಸಮಿತಿಗಳ ವತಿಯಿಂದ ಆಯೋಜಿಸಲಾದ ‘ವಾಕ್ ಫಾರ್ ಮಹೆ’ ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾರೆ. ಎಐಸಿಸಿ ವತಿಯಿಂದ ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಪಕ್ಷದ ಅಭಿಯಾನಗಳಲ್ಲಿ ಅಂಜಲಿ ನಿಂಬಾಳಕರ್ ತೊಡಗಿಸಿಕೊಂಡಿದ್ದಾರೆ.

Home add -Advt

ಪಕ್ಷದ ಬಲವರ್ಧನೆ ಹಾಗೂ ಸಂಘಟನೆ ಉದ್ದೇಶದಿಂದ ಕೇರಳ ಮತ್ತು ಪುದುಚೇರಿ ವ್ಯಾಪ್ತಿಯ ಈ ಪಾದಯಾತ್ರೆಯಲ್ಲಿ ಭಾಗವಹಿಸಿರುವ ಅವರು, ಮುಂಬರುವ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತುಂಬುವ ಕಾರ್ಯದಲ್ಲಿ ನಿರತರಾಗಿದ್ದಾರೆ.

Related Articles

Back to top button