ಪ್ರಗತಿವಾಹಿನಿ ಸುದ್ದಿ; ಚನ್ನಮ್ಮನ ಕಿತ್ತೂರು: ದೇಶ ರಕ್ಷಿಸುವಲ್ಲಿ ಸೈನಿಕರ ಕಾರ್ಯ ಮುಖ್ಯ. ಈ ಸೈನಿಕರನ್ನು ಸಿದ್ಧಗೊಳಿಸುವ ಕಾರ್ಯವನ್ನು ಇಲ್ಲಿನ ಗ್ರಾಮೀಣ ಯುವಕರ ಸೇನಾ ತರಬೇತಿ ಕೇಂದ್ರ ಮಾಡುತ್ತಿದೆ ಎಂದು ಲೇಖಕ ಪ್ರವೀಣ ಗಿರಿ ಶ್ಲಾಘಿಸಿದರು.
ಗುರುವಾರ ಪಟ್ಟಣದ ಹೊರ ವಲಯದಲ್ಲಿರುವ (ತಿಗಡೊಳ್ಳಿ ರಸ್ತೆ) ಸೇನಾ ತರಬೇತಿ ಕೇಂದ್ರದಲ್ಲಿ ಸೇನೆಗೆ ಸೇರಿದ ಅಭ್ಯರ್ಥಿಗಳ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು. ಐದು ವರ್ಷಗಳ ಹಿಂದೆ ಪುಟ್ಟ ಕೊಠಡಿಯಿಂದ, ಬೆರಳೆಣಿಕೆಯಷ್ಟು ವಿಧ್ಯಾರ್ಥಿಗಳಿಂದ ಆರಂಭಗೊಂಡ ಸಂಸ್ಥೆಯಿಂದು ದೊಡ್ಡದಾಗಿ ಬೆಳೆದಿದ್ದು ಹೆಮ್ಮೆಯ ಸಂಗತಿ ಎಂದ ಅವರು, ಸ್ವಾತಂತ್ರ್ಯದ ಪೂರ್ವದಲ್ಲಿಯೂ ತನ್ನ ನಾಡಿನ ರಕ್ಷಣೆಗಾಗಿ ಹೋರಾಡುವ ನಿಟ್ಟಿನಲ್ಲಿ ಕ್ರಾಂತಿ ನಗರಿ ಕಿತ್ತೂರಲ್ಲಿ ಯೋಧರ ಪಡೆ ಸಿದ್ಧವಿತ್ತು. ಈಗಲೂ ದೇಶದ ರಕ್ಷಣೆಗಾಗಿ ತಮ್ಮ ಜೀವನ ಮುಡುಪಾಗಿಡುವ ಸಲುವಾಗಿ ಇಲ್ಲಿನ ಗ್ರಾಮೀಣ ಯುವಕರ ಸೇನಾ ತರಬೇತಿ ಕೇಂದ್ರದಲ್ಲಿ ಭವಿಷ್ಯದ ಸೈನಿಕರಿಗೆ ಸೇನಾ ತರಬೇತಿ ನೀಡಿ ದೇಶ ರಕ್ಷಣೆಗೆ ಅವರನ್ನು ಸಿದ್ಧಗೊಳ್ಳುತ್ತಿರುವುದು ಕಿತ್ತೂರು ನಾಡಿನ ಹೆಮ್ಮೆ ಎಂದರು.
ಗ್ರಾಮೀಣ ಯುವಕರ ಸೇನಾ ತರಬೇತಿ ಕೇಂದ್ರದ ಸಂಸ್ಥಾಪಕ ಪರ್ವೇಜ್ ಹವಾಲ್ದಾರ್ ಮಾತನಾಡಿ, ಕಳೆದ ಐದು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಸೈನಿಕ ತರಬೇತಿ ನೀಡುತ್ತಿದ್ದು, ಹಲವಾರು ಜನ, ಸತತ ಪ್ರಯತ್ನ ಮತ್ತು ಪರಿಶ್ರಮದ ಮೂಲಕ ತಮ್ಮ ಜೀವನವನ್ನು ರೂಪಿಸಿಕೊಂಡಿದ್ದಾರೆ. ಈ ಸಂತೃಪ್ತಿ ನಮ್ಮ ಸಂಸ್ಥೆಗಿದೆ ಎಂದರು.
ಇದೇ ಸಂದರ್ಭದಲ್ಲಿ ಇತ್ತೀಚೆಗೆ ಭಾರತೀಯ ಸೇನೆಗೆ ಅಗ್ನಿವೀರರಾಗಿ ಆಯ್ಕೆಯಾದ ವಿಧ್ಯಾರ್ಥಿಗಳನ್ನು ಸತ್ಕರಿಸಲಾಯಿತು.
ಮಾಜಿ ಸೈನಿಕ ಶಿವಾನಂದ ಸುಣ್ಣದಕುಂಪಿ, ಮಾಜಿ ತಾಪಂ ಸದಸ್ಯ ಆಷ್ಫಾಕ್ ಹವಾಲ್ದಾರ್, ಶಿಕ್ಷಕ ಉಳವಯ್ಯ ನಿಂಗಯ್ಯನವರ, ಸಾಜಿದ್ ಅವರಾದಿ, ಜಗದೀಶ ಕಡೋಲಿ, ನಾಗಪ್ಪ ಹಳೇಮನಿ, ದೈಹಿಕ ತರಬೇತುದಾರ ತಕ್ವಿಮ್ ಗೋಕಾಕ, ವಿದ್ಯಾರ್ಥಿಗಳು ಸೇರಿದಂತೆ ಇತರರು ಇದ್ದರು.
*ಪತ್ನಿಯನ್ನೇ ಬರ್ಬರವಾಗಿ ಹತ್ಯೆಗೈದ ಶಿಕ್ಷಕ*
https://pragati.taskdun.com/teachermurderhusbandkalburgi/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ