Latest

ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಶಾಕ್; ’ಕೋಟಿಗೊಬ್ಬ’ನಿಗಾಗಿ ಥಿಯೇಟರ್ ಮುಂದೆ ಕಾದು ಕಾದು ಸುಸ್ತಾದ ಜನರು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಆಯುಧ ಪೂಜೆ ದಿನವಾದ ಇಂದು ಸ್ಯಾಂಡಲ್ ವುಡ್ ನ ಸ್ಟಾರ್ ನಟರಾದ ಕಿಚ್ಚ ಸುದೀಪ್ ಅವರ ಕೋಟಿಗೊಬ್ಬ -3 ಹಾಗೂ ದುನಿಯಾ ವಿಜಯ್ ಅವರ ಸಲಗ ಚಿತ್ರ ಬಿಡುಗಡೆಯಾಗಬೇಕಿತ್ತು. ಈಗಾಗಲೇ ಸಲಗ ಚಿತ್ರ ಥಿಯೇಟರ್ ಗೆ ಲಗ್ಗೆಯಿಟ್ಟಿದ್ದು, ಪ್ರದರ್ಶನ ಆರಂಭವಾಗಿದೆ. ಆದರೆ ಕೋಟಿಗೊಬ್ಬ ಚಿತ್ರ ಬಿಡುಗಡೆಯಾಗಿಲ್ಲ. ಇದು ಕಿಚ್ಚನ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿಗಳು ಕೋಟಿಗೊಬ್ಬ-3 ಚಿತ್ರ ಕಣ್ತುಂಬಿಕೊಳ್ಳಲು ಚಿತ್ರಮಂದಿರಗಳ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದಾರೆ. ದೂರದೂರುಗಳಿಂದ ಬೆಂಗಳೂರಿನ ಚಿತ್ರಮಂದಿರಗಳಿಗೆ ಆಗಮಿಸಿರುವ ಅಭಿಮಾನಿಗಳು ಮುಂಜಾನೆಯಿಂದಲೇ ಥಿಯಟರ್ ಮುಂದೆ ನಿಂತಿದ್ದಾರೆ. ಆದರೆ ಚಿತ್ರ ಬಿಡುಗಡೆ ವಿಳಂಬವಾಗುತ್ತಿದೆ.

ತಾಂತ್ರಿಕ ಸಮಸ್ಯೆಯಿಂದಾಗಿ ಕೋಟಿಗೊಬ್ಬ-3 ಚಿತ್ರ ಬಿಡಿಗಡೆ ತಡವಾಗುತ್ತಿದೆ ಎನ್ನಲಾಗಿದೆ. ಹೀಗಾಗಿ ಇಂದು ಚಿತ್ರ ಬಿಡುಗಡೆಯೇ ಅನುಮಾನ ಎಂಬ ಮಾತು ಕೂಡ ಕೇಳಿಬರುತ್ತಿದೆ. ಈ ನಡುವೆ ಬೆಳಗಿನ 7ಗಂಟೆಯ ಶೋ ಹಾಗೂ 10:30ರ ಎರಡು ಶೋ ಗಳು ರದ್ದಾಗಿದ್ದಾಗಿವೆ ಎಂದು ನಿರ್ಮಾಪಕ ಸೂರಪ್ಪ ಬಾಬು ತಿಳಿಸಿದ್ದಾರೆ.

ಉಪಾಹಾರ, ತಿಂಡಿ-ತಿನಿಸು ಬಿಟ್ಟು ಮುಂಜಾನೆಯಿಂದಲೇ ಚಿತ್ರಮಂದಿರಗಳ ಮುಂದೆ ಕಾದು ಕಾದು ಸುಸ್ತಾದ ಅಭಿಮಾನಿಗಳು ನಿರ್ಮಾಪಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಲಗ ಚಿತ್ರಗಳು ಪ್ರದರ್ಶನ ಕಾಣುತ್ತಿದೆ. ವಿಜಯ್ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಆದರೆ ಸುದೀಪ್ ಅವರ ಚಿತ್ರಕ್ಕೆ ಮಾತ್ರ ಅನ್ಯಾಯವೆಸಗಲಾಗುತ್ತಿದೆ. ಅಭಿಮಾನಿಗಳ ತಾಳ್ಮೆಗೂ ಮಿತಿಯಿದೆ. ಮುಂಜಾನೆಯಿಂದ ಕಾಯುತ್ತಿದ್ದೇವೆ ಅಭಿಮಾನಿಗಳಿಗೆ ನೋವಾಗಿದೆ. ಕೂಡಲೆ ಸಮಸ್ಯೆ ಬಗೆಹರಿಸಿ ಕೋಟಿಗೊಬ್ಬ-3 ಬಿಡುಗಡೆ ಮಾಡಿ ಎಂದು ಆಗ್ರಹಿಸಿದ್ದಾರೆ.

Home add -Advt

ಬಿಲ್ಲು-ಬಾಣಗಳಿಂದ ದಾಳಿ; ಐವರ ದುರ್ಮರಣ

Related Articles

Back to top button