Kannada NewsKarnataka NewsLatest

*108 ಆಂಬುಲೆನ್ಸ್ ಬ್ರೇಕ್ ಫೇಲ್ ಆಗಿ ಕಾರಿಗೆ ಡಿಕ್ಕಿ: ಭೀಕರ ಅಪಘಾತ*

ಪ್ರಗತಿವಾಹಿನಿ ಸುದ್ದಿ: 108 ಆಂಬುಲೆನ್ಸ್ ನ ಬ್ರೇಕ್ ಫೇಲ್ ಆಗಿ ಕಾರಿಗೆ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿರುವ ಘಟನೆ ಕೋಲಾರ ನಗರದಲ್ಲಿ ನಡೆದಿದೆ.

ಮಂಜುನಾಥ್ ಎಂಬುವವರಿಗೆ ಸೇರಿದ ಇಂಡಿಕಾ ಕಾರಿಗೆ 108 ಆಂಬುಲೆನ್ಸ್ ವಾಅಹನ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಚಿಕ್ಕಬಳ್ಳಪೌರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಬತ್ಲಹಳ್ಳಿಯ ಸರ್ಕಾರಿ ಆಸ್ಪತ್ರೆಗೆ ಸೇರಿದ ಆಂಬುಲೆನ್ಸ್ ಇದಾಗಿದೆ.

ರೋಗಿಯನ್ನು ಆಸ್ಪತ್ರೆಗೆ ಬಿಟ್ಟು ವಾಪಸ್ ಆಗುತ್ತಿದ್ದ ವೇಳೆ 108 ಆಂಬುಲೆನ್ಸ್ ನ ಬ್ರೇಕ್ ಫೇಲ್ ಆಗಿದೆ. ಚಾಲಕನ ನಿಯಂತ್ರಣ ಕಳೆದುಕೊಂಡ ಆಂಬುಲೆನ್ಸ್ ಎದುರಿಗೆ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಕೋಲಾರ ನಗರ ಪೊಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button