Karnataka NewsLatest
ಬೆಳಗಾವಿ: ಕೆಎಸ್ಆರ್ ಟಿಸಿ ಬಸ್- ಬೈಕ್ ನಡುವೆ ಅಪಘಾತ; ಸವಾರ ಸ್ಥಳದಲ್ಲೇ ಸಾವು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗೋಕಾಕ ತಾಲೂಕಿನ ಚಿಕ್ಕನಂದಿ ಗ್ರಾಮದ ಬಳಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಚಿಕ್ಕನಂದಿ ಗ್ರಾಮದ ರೇವಪ್ಪ ಬಣವಿ ಮೃತಪಟ್ಟವರು. ಅವರು ಗೋಕಾಕ್ ನಿಂದ ಚಿಕ್ಕನಂದಿಗೆ ಬೈಕ್ ನಲ್ಲಿ ಹೋಗುತ್ತಿದ್ದಾಗ ಉಡುಪಿಯಿಂದ ಗೋಕಾಕ್ ಗೆ ಹೋಗುತ್ತಿದ್ದ ಬಸ್ ಗೆ ಮುಖಾಮುಖಿ ಡಿಕ್ಕಿಯಾಗಿ ಈ ಅವಘಡ ಸಂಭವಿಸಿದೆ.
ಈ ಕುರಿತು ಗೋಕಾಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ಮುಂದುವರಿದಿದೆ.
ತೆಲುಗು ನಟಿ ಮೇಲೆ ಅತ್ಯಾಚಾರ; ಫಿಟ್ನೆಸ್ ತರಬೇತುದಾರನ ಬಂಧನ



