Latest

ಹೊಳೆಗೆ ಉರುಳಿ ಬಿದ್ದ KSRTC ಬಸ್; 25 ಪ್ರಯಾಣಿಕರಿಗೆ ಗಾಯ

ಪ್ರಗತಿವಾಹಿನಿ ಸುದ್ದಿ; ಮಡಿಕೇರಿ: ಕೆ ಎಸ್ ಆರ್ ಟಿಸಿ ಬಸ್ ಹೊಳೆಗೆ ಉರುಳಿಬಿದ್ದ ಪರಿಣಾಮ 25ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂದಿರುವ ಘಟನೆ ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಸಂಪಾಜೆ ಬಳಿ ನಡೆದಿದೆ.

ಮಡಿಕೇರಿ ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಳಿಯ ಕಿರು ಹೊಳೆಗೆ ಬಸ್ ಉರುಳಿ ಬಿದ್ದುದೆ. ಧರ್ಮಸ್ಥಳದಿಂದ ಗುಂಡ್ಲುಪೇಟೆಗೆ ಬರುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಬಸ್ ನಲ್ಲಿದ್ದ 25ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿದ್ದು, ಅವರಲ್ಲಿ ಐವರ ಸ್ಥಿತಿ ಗಂಭೀರವಾಗಿದೆ.

Home add -Advt

ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಬಸ್ ಪಲ್ಟಿಯಾಗಿದ್ದು, ಗಾಯಾಳು ಪ್ರಯಾಣಿಕರನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಿಜಾಬ್ ಸಂಘರ್ಷ; ಪರೀಕ್ಷೆ ವಂಚಿತರಿಗೆ ಮರುಪರೀಕ್ಷೆ ವಿಚಾರ; ಸಚಿವರ ಸ್ಪಷ್ಟನೆ

Related Articles

Back to top button