Latest

*KSRTC ಬಸ್ ಚಾಲಕನಿಗೆ ನಡುರಸ್ತೆಯಲ್ಲಿಯೇ ಚಾಕು ಇರಿದ ಟಾಟಾ ಏಸ್ ಚಾಲಕ*

ಪ್ರಗತಿವಾಹಿನಿ ಸುದ್ದಿ: ವಾಹನ ಚಾಲಕರ ನಡುವೆ ಓವರ್ ಟೇಕ್ ಮಾಡುವ ವಿಚಾರವಾಗಿ ಗಲಾಟೆ ನಡೆದು ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕನಿಗೆ ಚಾಕು ಇರಿದ ಘಟನೆ ದಾಬಸ್ ಪೇಟೆಯಲ್ಲಿ ನಡೆದಿದೆ.

Home add -Advt

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್ ಪೇಟೆಯಲ್ಲಿ ನಡು ರಸ್ತೆಯಲ್ಲಿಯೇ ಬಸ್ ಚಾಲಕನಿಗೆ ಟಾಟಾ ಏಸ್ ಚಾಲಕ ಚಾಕು ಇರಿದಿದ್ದಾನೆ. ಬಸ್ ಚಾಲಕ ಶಿವಪ್ಪ ಮಡಿವಾಳ ಗಂಭೀರವಾಗಿ ಗಾಯಗೊಂಡಿದ್ದು, ತುಮಕೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೊಪ್ಪಳದಿಂದ ಬೆಂಗಳೂರಿಗೆ ಬಸ್ ಬರುತ್ತಿದ್ದ ವೇಳೆ ಟಾಟಾ ಏಸ್ ಚಾಲಕ ಹಾಗೂ ಬಸ್ ಚಾಲಕನ ನಡುವೆ ಓವರ್ ಟೇಕ್ ವಿಚಾರವಾಗಿ ಗಲಾಟೆಯಾಗಿದೆ. ಟಾಟಾ ಏಸ್ ಚಾಲಕ ಭಾಸ್ಕರ ರೆಡ್ಡಿ, ಬಸ್ ಚಾಲಕನಿಗೆ ಚಾಕು ಇರಿದಿದ್ದು, ದಾಬಸ್ ಪೇಟೆ ಪೊಲೀಸರು ಭಾಸ್ಕರ್ ರೆಡ್ಡಿಯನ್ನು ಬಂಧಿಸಿದ್ದಾರೆ.

ದಾಬಸ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button