Politics

*ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ, ಅಶ್ಲೀಲ ವಿಡಿಯೋ ಕೇಸ್: SIT ಹೆಲ್ಪ್ ಲೈನ್ ಗೆ ಬಂದಿದೆ 30ಕ್ಕೂ ಹೆಚ್ಚು ಕರೆಗಳು*

ಪ್ರಗತಿವಾಹಿನಿ ಸುದ್ದಿ: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಹಾಗೂ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ದೂರು ನೀಡುವವರಿಗಾಗಿ ಸಹಾಯವಾಣಿ ಆರಂಭಿಸಿದ್ದು, ಈವರೆಗೆ 30ಕ್ಕೂ ಹೆಚ್ಚು ಕರೆ ಗಳು ಬಂದಿವೆ.

Home add -Advt

ಎಸ್ ಐಟಿ ಸಹಾಯವಾಣಿಗೆ ಪ್ರಜ್ವಲ್ ರೇವಣ್ಣ ದೌರ್ಜನ್ಯ ಪ್ರಕರಣ ಸಂಬಂಧ 30ಕ್ಕೂ ಹೆಚ್ಚು ಕರೆಗಳು ಬಂದಿವೆ. ಆದರೆ ಸಂತ್ರಸ್ತೆಯರು ಈವರೆಗೆ ದೂರು ನೀಡಿಲ್ಲ. ಹೆಲ್ಪ್ ಲೈನ್ ಸಂಪರ್ಕಿಸಿ ಮಾಹಿತಿ ನೀಡುವಂತೆ ಎಸ್ಐಟಿ ಮನವಿ ಮಾಡಿದೆ.

ಸಹಾಯವಾಣಿ 6360938947 ಸಂಖ್ಯೆಗೆ ಸಂಪರ್ಕಿಸಿ ದೂರು ನೀಡುವಂತೆ ಎಸ್ಐಟಿ ತಿಳಿಸಿದೆ. ದೂರು ನೀಡಿದವರ ಗುರುತು ಹಾಗೂ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು. ನೇರವಾಗಿ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಇನ್ನು ಹೆಲ್ಪ್ ಲೈನ್ ಮೂಲಕ ದಾಖಲಾಗಿರುವ ಹೇಳಿಕೆಗಳನ್ನು ಪರಿಗಣಿಸಲಾಗುವುದು ಎಂದು ತಿಳಿಸಿದೆ.

Related Articles

Back to top button