Belagavi NewsBelgaum NewsKarnataka News

*ವರನ ತಾಯಿಗೆ ಕಣ್ಣು ಕಾಣಿಸಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡ ವಧು*

ಪ್ರಗತಿವಾಹಿನಿ ಸುದ್ದಿ: ವರನ ತಾಯಿ ಕುರುಡು ಎಂದು ತಿಳಿದ ನಂತರ ವಧು ಮದುವೆಯ ಹಿಂದಿನ ದಿನ ಮಧ್ಯರಾತ್ರಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನವಲಿಹಾಳ ಗ್ರಾಮದಲ್ಲಿ ಸಂಭವಿಸಿದೆ.

ಶೃತಿ ಶಂಕ‌ರ್ ಬುರುಡ (ವಯಸ್ಸು 24) ಆತ್ಮಹತ್ಯೆಗೆ ಶರಣಾದ ವಧು. ನವಲಿಹಾಳ ಗ್ರಾಮದ ಮೃತ ಶೃತಿ ಶಂಕರ ಬುರುಡ ಬೆಳಗಾವಿಯ ಹುಡುಗನೊಂದಿಗೆ ನಿಶ್ಚಿತಾರ್ಥವಾಗಿತ್ತು.

Home add -Advt

ಮೇ 25 ರಂದು ಮದುವೆ ನಡೆಯಬೇಕಿತ್ತು. 24 ನೇ ದಿನಾಂಕದಂದು ರಾತ್ರಿ ಅರಿಶಿನ ಹಚ್ಚುವ ಕಾರ್ಯಕ್ರಮವಿತ್ತು. ಅದೇ ದಿನ ರಾತ್ರಿ ಶೃತಿ ಮನೆಯಿಂದ ಕಾಣೆಯಾಗಿದ್ದಳು.

ಮರುದಿನ ಬಾವಿಯಲ್ಲಿ ಶೃತಿ ಮೃತದೇಹ ಪತ್ತೆಯಾಗಿದೆ. ಖಡಕಲಾಟ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. 

Related Articles

Back to top button