Politics

*ಬಿಜೆಪಿ ಮುಖಂಡ ದೇವರಾಜೇಗೌಡ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇವೆ; ಎಲ್.ಆರ್.ಶಿವರಾಮೇಗೌಡ*

ಪ್ರಗತಿವಾಹಿನಿ ಸುದ್ದಿ: ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಆರೋಪ ಮಾಡಿದ್ದ ಬಿಜೆಪಿ ಮುಖಂಡ, ವಕೀಲ ದೆವರಾಜೇಗೌಡ ವಿರುದ್ಧ ಮಾನನಷ್ತ ಮೊಕದ್ದಮೆ ದಾಖಲಿಸುವುದಾಗಿ ಎಲ್.ಆರ್.ಶಿವರಾಮೇಗೌಡ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಎಲ್.ಆರ್.ಶಿವರಾಮೇಗೌಡ, ಪೆನ್ ಡ್ರೈವ್ ವಿಚಾರಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಪ್ರಕರಣದ ತನಿಖೆ ಬೇರೆ ಬೇರೆ ದಿಕ್ಕು ಪಡೆದುಕೊಳ್ಳುತ್ತಿದೆ. ದೇವರಾಜೇಗೌಡ ಆರೋಪ ಸುಳ್ಳು. ಆತ ಒಬ್ಬ ನಾಲಾಯಕ್, ವಂಚಕ ಎಂದು ಕಿಡಿಕಾರಿದ್ದಾರೆ.

ಪೆನ್ ಡ್ರೈವ್ ವ್ಯಾಪಾರಕ್ಕಿಟ್ಟವನೇ ದೇವರಾಜೇಗೌಡ. ಪ್ರಾಮಾಣಿಕವಾಗಿ ಈ ವಿಚರದಲ್ಲಿ ತನಿಖೆಯಾಗಲಿ. ದೇವರಾಜೇಗೌಡ ಹಾಗೂ ಕಾರ್ತಿಕ್ ಇಬ್ಬರನ್ನೂ ತನಿಖೆ ಮಾಡಬೇಕು. ಈ ಪ್ರಕರಣಕ್ಕೂ ಡಿ.ಕೆ.ಶಿವಕುಮಾರ್ ಅವರಿಗಾಗಲಿ, ನನಗಾಗಲಿ ಸಂಬಂಧವಿಲ್ಲ.

Home add -Advt

ದೇವರಾಜೇಗೌಡ, ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿಸುವಂತೆ ನನಗೆ ಕೇಳಿದ್ದ. ನಾನು ಆಗಲಿ ಎಂದು ಹೇಳಿದ್ದೆ. ದೇವರಾಜೇಗೌಡ ಏಪ್ರಿಲ್ 29ರಂದು ಬೆಂಗಳೂರಿನ ಎಂ.ಜಿ.ರಸ್ತೆಯ ಬೌರಿಂಗ್ ಕ್ಲಬ್ ನಲ್ಲಿ ನಮ್ಮನ್ನು ಭೇಟಿಯಾಗಿದ್ದ. ಡಿ.ಕೆ.ಶಿವಕುಮಾರ್ ಭೇಟಿ ಮಾಡಿಸುವಂತೆ ಕೇಳಿಕೊಂಡಿದ್ದಾಗ ಫೋನ್ ನಲ್ಲಿ ಮಾತನಾಡಿಸಿದ್ದೆ. ಡಿ.ಕೆ.ಶಿವಕುಮಾರ್ ಅವರು ಹಲೋ ಎಂದಷ್ಟೇ ಹೇಳಿದ್ದಾರೆ. ಇದನ್ನೇ ಇಟ್ಟುಕೊಂಡು ಸುಳ್ಳು ಆರೋಪ ಮಾಡುತ್ತಿದ್ದಾನೆ.ದೇವರಜೇಗೌದ ವಿರುದ್ಧ ಮಾನನಷ್ಟ ಮೊಕದ್ದಮೆ, ಕ್ರಿಮಿನಲ್ ಕೇಸ್ ದಾಖಲಿಸುತ್ತೇನೆ ಎಂದು ಹೇಳಿದ್ದಾರೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button