Belagavi NewsBelgaum NewsKannada NewsKarnataka NewsLatestPolitics

*ಅಪೌಷ್ಠಿಕ ಮಕ್ಕಳ ನಿರ್ವಹಣೆಗೆ “ಚಿಗುರುʼ ಯೋಜನೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಚಾಲನೆ*

ಸುವರ್ಣ ಸೌಧದಲ್ಲಿ ಚಾಲನೆ ನೀಡಿದ ಸಚಿವರು

ಪ್ರಗತಿವಾಹಿನಿ ಸುದ್ದಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಮಕ್ಕಳಲ್ಲಿ ಅಪೌಷ್ಠಿಕತೆಯನ್ನು ನಿವಾರಿಸಲು ಸಮುದಾಯ ಆಧಾರಿತ ತೀವ್ರ ಅಪೌಷ್ಠಿಕ ಮಕ್ಕಳ ನಿರ್ವಹಣೆಯ ಯೋಜನೆ ʼಚಿಗುರುʼ ಕಾರ್ಯಕ್ರಮಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್‌ ಚಾಲನೆ ನೀಡಿದರು.


ಮಕ್ಕಳ ಅಪೌಷ್ಟಿಕತೆ ನಿವಾರಣೆ ಇಲಾಖೆಯ ಅತ್ಯಂತ ಆದ್ಯತೆಯ ಯೋಜನೆಗಳಲ್ಲೊಂದಾಗಿದ್ದು, ಈ ಮೂಲಕ ಮತ್ತೊಂದು ಹೆಜ್ಜೆ ಇಟ್ಟಂತಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

Home add -Advt

ಯೋಜನೆಯ ವಿವರ:

ಮಕ್ಕಳಲ್ಲಿ ಅಪೌಷ್ಠಿಕತೆಯನ್ನು ನಿವಾರಿಸಲು ಸಮುದಾಯ ಆಧಾರಿತ ತೀವ್ರ ಅಪೌಷ್ಟಿಕ ಮಕ್ಕಳ ನಿರ್ವಹಣೆ [Community Based Management of acute malnourished (C-MAM)] ಈ ಯೋಜನೆಯ ಭಾಗವಾಗಿದೆ.


NFHS-5 ಸಮೀಕ್ಷೆಯ ಪ್ರಕಾರ ಮಕ್ಕಳಲ್ಲಿ ಅಪೌಷ್ಠಿಕತೆಯನ್ನು ನಿವಾರಿಸಲು ಸಮುದಾಯ ಆಧಾರಿತ ತೀವ್ರ ಅಪೌಷ್ಟಿಕ ಮಕ್ಕಳ ನಿರ್ವಹಣೆ ಯೋಜನೆಯನ್ನು ಅನುಷ್ಟಾನಗೊಳಿಸಲು UNICEF ಸಂಸ್ಥೆಯ ಸಹಯೋಗದೊಂದಿಗೆ C-MAM ಬಗ್ಗೆ technical protocol ಅನ್ನು ಕೇಂದ್ರ ಸರ್ಕಾರದಿಂದ ಒದಗಿಸಲಾದ document ಮಾದರಿಯಲ್ಲಿ ಸಿದ್ಧಪಡಿಸಲಾಗಿದೆ.

ಯೋಜನೆಯನ್ನು ಪ್ರಸ್ತುತ ಕರ್ನಾಟಕ ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿನ high burdened in terms of wasting and stunting ಎಂದು ಗುರುತಿಸಲಾಗಿರುವ ಬಳ್ಳಾರಿ, ಬೀದರ್‌, ಕಲಬುರಗಿ, ಯಾದಗಿರಿ, ಬೆಳಗಾವಿ, ರಾಯಚೂರು, ಚಿತ್ರದುರ್ಗ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲು ಯೋಜಿಸಲಾಗಿದೆ. ಯೋಜನೆಯಡಿ, ವೈದ್ಯಕೀಯ ಸಮಸ್ಯೆಗಳಿಲ್ಲದ ತೀವ್ರ ಮತ್ತು ಸಾಧಾರಣ ಅಪೌಷ್ಟಿಕ ಮಕ್ಕಳಿಗೆ ವೈದ್ಯಕೀಯ ಪೂರಕಾಂಶಗಳು ಹಾಗೂ ಹೆಚ್ಚು ಪೋಷಕಾಂಶಯುಕ್ತ ಪೌಷ್ಟಿಕ ಆಹಾರವನ್ನು ನೀಡಲಾಗುತ್ತದೆ.

ಪೋಷಣೆ ತಾಯಿ ಮಾತ್ರವಲ್ಲ, ಇಡೀ ಕುಟುಂಬದ ಜವಾಬ್ದಾರಿ ಎಂಬ ಪರಿಕಲ್ಪನೆಯಡಿ ತಾಯಂದಿರು ಮತ್ತು ಸಮುದಾಯದ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ಮನೆಮನೆಗೆ ಭೇಟಿ ಮೂಲಕ ಆರು ತಿಂಗಳುಗಳ ಕಾಲ ಸಮೀಪವಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ. ಸದರಿ ಯೋಜನೆಯಡಿ ಯೂನಿಸೆಫ್‌ ಕೂಡ ಸಹಭಾಗಿಯಾಗಿದ್ದು, ಪ್ರಾಥಮಿಕ ಹಂತದ ತರಬೇತಿಗಳಿಗೆ ಸಂಬಂಧಿಸಿದಂತೆ ಯೂನಿಸೆಫ್‌ ವತಿಯಿಂದ 8 ಜಿಲ್ಲೆಗಳ ಅಂಗನವಾಡಿ ಕಾರ್ಯಕರ್ತೆ ಮತ್ತು ಮೇಲ್ವಿಚಾರಕಿಯರಿಗೆ C-MAM Intervention ಅಡಿಯಲ್ಲಿ ಕೈಗೊಳ್ಳಬೇಕಾಗಿರುವ ಕ್ರಮಗಳ ಕುರಿತು ಸಂಪೂರ್ಣವಾದ ಮಾಹಿತಿಯನ್ನು ಒದಗಿಸಲು ತರಬೇತಿಯನ್ನು ವಿನ್ಯಾಸಗೊಳಿಸಲಾಗಿರುತ್ತದೆ.


ಈ ವೇಳೆ‌ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಶಾಮ್ಲಾ ಇಕ್ಬಾಲ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕರಾದ ಮಹೇಶ್‌ ಬಾಬು, ವಿಕಲಚೇತನರ‌ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ನಿರ್ದೇಶಕರಾದ ರಾಘವೇಂದ್ರ, ಇಲಾಖೆ ಜಂಟಿ ನಿರ್ದೇಶಕರು ಹಾಗೂ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಬಿ.ಎಚ್.ನಿಶ್ಚಲ್‌, ಯುನಿಸೆಫ್‌ನ ಕರ್ನಾಟಕ ಪ್ರತಿನಿಧಿ ಖ್ಯಾತಿ ತಿವಾರಿ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

Related Articles

Back to top button