Kannada NewsKarnataka NewsLatest

ಬೆಳಗಾವಿ ನಗರ ಮಧ್ಯದಲ್ಲಿ ಭೂ ಕುಸಿತ: ನಾಲ್ವರ ರಕ್ಷಣೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಲ್ಲಿಯ ಗೊಂದಳಿ ಗಲ್ಲಿಯಲ್ಲಿ ಶನಿವಾರ ರಾತ್ರಿ ಭೂ ಕುಸಿತ ಉಂಟಾಗಿ ಮನೆಯೊಂದು ಕುಸಿದು ಹೋಗಿದೆ. ಮನೆಯಲ್ಲಿ ಸಿಲುಕಿಕೊಂಡಿದ್ದ ನಾಲ್ವರನ್ನು  ರಕ್ಷಿಸಲಾಗಿದೆ.

Home add -Advt

ಈಗ ಸ್ವಲ್ಪ ಹೊತ್ತಿನ ಮುಂಚೆ ಘಟನೆ ನಡೆದಿದೆ. ಇದ್ದಕ್ಕಿದ್ದಂತೆ ಭೂ ಕುಸಿತ ಉಂಟಾಗಿ ಮನೆ ಮತ್ತು ಎದುರುಗಡೆ ಇದ್ದ ಇಸ್ತ್ರಿ ಅಂಗಡಿ ಕುಸಿದು ಹೋಗಿದೆ. ಮನೆಯೊಳಗೆ ನಾಲ್ವರು ಸಿಕ್ಕಿಕೊಂಡಿದ್ದರು.

ತಕ್ಷಣ ತುರ್ತು ರಕ್ಷಣಾ ತಂಡ, ಅಗ್ನಿಶಾಮಕ ದಳ, ಹೆಸ್ಕಾಂ ಸಿಬ್ಬಂದಿ, ಪೊಲೀಸರು ಆಗಮಿಸಿ ಸಿಲುಕಿಕೊಂಡವರನ್ನು ರಕ್ಷಿಸಿದ್ದಾರೆ. ಆದರೆ ಅಪಾರ ಆಸ್ತಿಪಾಸ್ತಿ ಮಣ್ಣೊಳಗೆ ಹುದುಗಿಹೋಗಿದೆ. ಕಾರ್ಯಾಚರಣೆ ಇನ್ನೂ ಮುಂದುವರಿದಿದೆ.

ಘಟನೆ ನಡೆಯುತ್ತಿದ್ದಂತೆ ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದರಿಂದ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿತ್ತು.

 

Related Articles

Back to top button