Kannada NewsKarnataka News

ಬೆಂಗಳೂರು- ಬೆಳಗಾವಿ- ಅಹಮದಾಬಾದ್ -ಬೆಳಗಾವಿ -ಮುಂಬೈ ವಿಮಾನ ಸಂಚಾರಕ್ಕೆ ಚಾಲನೆ ನೀಡಿದ ಸುರೇಶ ಅಂಗಡಿ

ಬೆಂಗಳೂರು- ಬೆಳಗಾವಿ- ಅಹಮದಾಬಾದ್ -ಬೆಳಗಾವಿ -ಮುಂಬೈ ವಿಮಾನ ಸಂಚಾರಕ್ಕೆ ಚಾಲನೆ ನೀಡಿದ ಸುರೇಶ ಅಂಗಡಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –

ಬೆಂಗಳೂರು- ಬೆಳಗಾವಿ- ಅಹಮದಾಬಾದ್ -ಬೆಳಗಾವಿ -ಮುಂಬೈ ವಿಮಾನ ಸಂಚಾರಕ್ಕೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಚಾಲನೆ ನೀಡಿದರು.

ಇಂದಿನಿಂದ ಸ್ಟಾರ್ ಏರ್ ವೇಸ್ ಬೆಂಗಳೂರು- ಬೆಳಗಾವಿ- ಅಹಮದಾಬಾದ್ -ಬೆಳಗಾವಿ -ಮುಂಬೈ

ಮಧ್ಯೆ ವಿಮಾನ ಸೇವೆ ಆರಂಭಿಸಲಿದೆ. ವಾರದ  4 ದಿನ (ಗುರುವಾರ, ಶುಕ್ರವಾರ, ಶನಿವಾರ ಹಾಗೂ ಭಾನುವಾರ) ವಿಮಾನ ಸಂಚರಿಸಲಿದೆ. ಬೆಳಗಾವಿ ಏರ್ ಫೋರ್ಟ್ ಡೈರೆಕ್ಟರ್ ರಾಜೇಶಕುಮಾರ ಮೌರ್ಯ,  ಮಹಾನಗರ ಬಿಜೆಪಿ ಅಧ್ಯಕ್ಷ ರಾಜೇಂದ್ರ ಕುಮಾರ ಹರಕುಣಿ, ಏರ್ ಫೋರ್ಟ್ ಮತ್ತು ಸ್ಟಾರ್ ಏರ್ ವೇಸ್ ಅಧಿಕಾರಿಗಳು, ಸಿಬ್ಬಂದಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಇದ್ದರು.

ಉಡಾನ್ 3ರಲ್ಲಿ ಸೇರ್ಪಡೆಯಾದ ನಂತರ ಬೆಳಗಾವಿ ವಿಮಾನ ನಿಲ್ದಾಣದಿಂದ  ರಾಷ್ಟ್ರದ ವಿವಿಧ ನಗರಗಳಿಗೆ ವಿಮಾನ ಸಂಪರ್ಕ ಸಾಧ್ಯವಾಗಿದ್ದು, ನಿರಂತರ ಚಟುವಟಿಕೆಯ ಕೇಂದ್ರವಾಗಿದೆ ವಿಮಾನ ನಿಲ್ದಾಣ.

 

Related Articles

Back to top button