Cancer Hospital 2
Beereshwara 36
LaxmiTai 5

ಧರ್ಮದ ಆಧಾರದ ಮೇಲೆ ದಬ್ಬಾಳಿಕೆಗೆ ಗುರಿಯಾದವರನ್ನು ರಕ್ಷಿಸಲು ಕಾನೂನು ಜಾರಿ ಮಾಡಲಾಗಿದೆ: ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ವಿಪಕ್ಷಗಳ ವಿರುದ್ಧ ವಾಗ್ದಾಳಿ

Anvekar 3
GIT add 2024-1

ಪ್ರಗತಿವಾಹಿನಿ ಸುದ್ದಿ, ತುಮಕೂರು: ಧರ್ಮದ ಆಧಾರಾದ ಮೇಲೆ ದಬ್ಬಾಳಿಕೆಗೆ  ಗುರಿಯಾದವರನ್ನು ರಕ್ಷಿಸಲು ನಾವು ಕಾನೂನು ತಂದಿದ್ದೇವೆ. ದಬ್ಬಾಳಿಕೆಗೆ ಒಳಗಾದವರು ಭಾರತಕ್ಕೆ ಆಗಮಿಸುತ್ತಿದ್ದಾರೆ. ಅಂತವರನ್ನು ರಕ್ಷಿಸುವುದು ನಮ್ಮ ಕರ್ತವ್ಯ.  ಆದರೆ ಕೆಲವರು ಸಂಸತ್ ನಿರ್ಣಯದ ವಿರುದ್ಧ ಹೋರಾಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಪಕ್ಷಗಳ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ, ಲಿಂಗೈಕ್ಯ ಡಾ.ಶಿವಕುಮಾರ ಗದ್ದುಗೆ ದಾರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಠದ ಮಕ್ಕಳನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ದಬ್ಬಾಳಿಕೆಗೆ ಒಳಗಾದವರು ಭಾರತಕ್ಕೆ ಆಗಮಿಸುತ್ತಿದ್ದಾರೆ.  ಪಕಿಸ್ತಾನದಿಂದ ಸಿಖ್ಖರು, ಜೈನರು, ಪಾರ್ಸಿಗಳು ತೊಂದರೆಗೀಡಾಗಿ ಭಾರತಕ್ಕೆ ಬರುತ್ತಿದ್ದಾರೆ.  ಅಂತವರ ರಕ್ಷಣೆಗೆ ಮುಂದಾದರೆ  ಕೆಲವರು ಅದರ ವಿರುದ್ಧ ಹೋರಾಡುತ್ತಿದ್ದಾರೆ. ಸಂಕಷ್ಟದಲ್ಲಿದ್ದವರನ್ನು ರಕ್ಷಿಸುವುದು ತಪ್ಪೇ ಎಂದು ಪ್ರಶ್ನಿಸಿದರು.

ಸಂಸತ್ ನಿರ್ಣಗಳ ವಿರುದ್ಧ ದೇಶದಲ್ಲಿ ಹೋರಾಟ, ಪ್ರತಿಭಟನೆಗಳನ್ನು ಮಾಡುವ ಬದಲು ಪಾಕಿಸ್ತಾನದಲ್ಲಿ ದಬ್ಬಾಳಿಕೆ ಮಾಡುತ್ತಿರುವವರ ವಿರುದ್ಧ ಹೋರಾಡಿ. ಪಾಕ್ ನ 70 ವರ್ಷಾಗಳ ಕರಾಳ ಕಾರ್ಯದ ವಿರುದ್ಧ ಹೋರಾಡಿ. ವಿಪಕ್ಷಗಳು ದೇಶದ ಜನರ ದಾರಿ ತಪ್ಪಿಸುವ  ಕೆಲಸ ಮಾಡುತ್ತ  ಪ್ರತಿಭಟನೆಗಳಿಗೆ ಪ್ರಚೋದನೆ ನೀಡುವ ಕೆಲಸ ಮಾಡುತ್ತಿವೆ ಎಂದು ವಾಗ್ದಾಳಿ ನಡೆಸಿದರು.

ದೇಶದ ಪ್ರತಿಯೊಬ್ಬ ವ್ಯಕ್ತಿಯ ಜೀವನಮಟ್ಟವನ್ನು ಸುಧಾರಿಸುವತ್ತ ನಮ್ಮ ಸರ್ಕಾರ ಕಾರ್ಯನಿರ್ವಹಿಸುತ್ತಿದೆ.  ಆರೋಗ್ಯ ವಿಮೆ, ಗ್ಯಾಸ್ ಸಂಪರ್ಕ, ಮನೆ, ವಿದ್ಯುತ್ ಸಂಪರ್ಕ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸೋದು ನಮ್ಮ ಸರ್ಕಾರದ ಕೆಲಸ.  ದೊಡ್ಡ ಬದಲಾವಣೆಗಾಗಿ ಜನರು ಆಶೀರ್ವಾದ ಮಾಡಿದ್ದಾರೆ. ದೇಶವನ್ನು ಬಡತನದ ಸಂಕೋಲೆಯಿಂದ ಮುಕ್ತಗೊಳಿಸೋಣ.  ಭಯೋತ್ಪಾದನೆ ವಿರುದ್ಧ ಭಾರತದ ನೀತಿಯಲ್ಲಿ ಬದಲಾವಣೆಯಾಗಿದೆ ಎಂಬುದಕ್ಕೆ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು ಮಾಡಿರುವುದೇ ನಿದರ್ಶನ. ರಾಮ ಮಂದಿರ ನಿರ್ಮಿಸುವ ಪ್ರಶಸ್ತ ವಾತಾವರಣ ನಿರ್ಮಾಣವಾಗುತ್ತಿದೆ. ಆದರೆ ಕಾಂಗ್ರೆಸ್ ಹಾಗೂ ಅವರ ಸಹಚರರು ಸಂವಿಧಾನಾದ ವಿರುದ್ಧವಾಗಿದ್ದಾರೆ.

Emergency Service

2014ರಲ್ಲಿ ಸ್ವಚ್ಛ ಭಾರತ ನೀತಿಯಲ್ಲಿ ಭಾಗಿಯಾಗಿ ಎಂದು ಮಾನವಿ ಮಾಡಿದ್ದೆವು. ಇದೀಗ ಬಯಲುಮುಕ್ತ ಶೌಚಾಲಯದ ಪಣ ತೊಡೋಣ. 21ನೇ ಶತಮಾನದ 3 ನೇ ದಶಕದಲ್ಲಿ ನವಭಾರತ ನಿರ್ಮಾಣಕ್ಕೆ ಬಲವಾದ ಅಡಿಪಾಯ ಹಾಕಿದ್ದೇವೆ. ಪ್ರಕೃತಿ, ಪರಿಸರ ಸಂರಕ್ಷಣೆಗಾಗಿ ಪ್ಲಾಸ್ಟಿಕ್ ಮುಕ್ತ ಮಾಡೋಣ. ಜಲ ಸಂರಕ್ಷಣೆಗೆ ಜನಾ ಜಾಗೃತಿ ಆಂದೋಲನ ಮಾಡೋಣವೆಂದು ಕರೆ ನೀಡಿದರು.

ಇದೇ ವೇಳೆ ಸಿದ್ದಗಂಗಾ ಮಠಕ್ಕೆ ಅಗಮಿಸಿರುವುದಕ್ಕೆ ನನಗೆ ಸಂತಸವಾಗುತ್ತಿದೆ. ಆದರೆ ಪೂಜ್ಯ ಶಿವಕುಮಾರ ಶ್ರೀಗಳು ಇಲ್ಲ ಎಂಬ ಶೂನ್ಯ ಆವರಿಸುತ್ತಿದೆ.  ಶ್ರೀಗಳ ಬೌತಿಕ ಅನುಪಸ್ಥಿತಿ ನಮ್ಮನ್ನು ಕಾಡುತ್ತಿದೆ ಎಂದರು. ಶ್ರೀಗಳ ವಸ್ತುಸಂಗ್ರಹಾಲಯಕ್ಕೆ ಶಿಲನ್ಯಾಸ ನನ್ನ ಸೌಭಾಗ್ಯ ಎಂದ ಪ್ರಧಾನಿ ಮೋದಿ, ಕರ್ನಾಟಕದ ಮತ್ತೊಬ್ಬ ಸಂತರೂ ನಮ್ಮಿಂದ ದೂರವಾಗಿದ್ದಾರೆ. ಪೇಜಾವರ ಶ್ರೀಗಳು ನಮ್ಮನ್ನು ಅಗಲಿರುವುದು ದು:ಖ ತಂದಿದೆ ಎಂದು ಹೇಳಿದರು.

ಕಲ್ಪತರು ನಾಡಲ್ಲಿ ಪ್ರಧಾನಿ ಮೋದಿ: ಸರಣಿ ಟ್ವೀಟ್ ಮೂಲಕ ಪ್ರಶ್ನೆಗಳನ್ನು ಮುಂದಿಟ್ಟ ಕಾಂಗ್ರೆಸ್

Bottom Add3
Bottom Ad 2