Karnataka NewsLatest

*ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣ: ಅಂತಿಮ ತನಿಖಾ ವರದಿ ಸಲ್ಲಿಸಿದ SIT: ಆಘಾತಕಾರಿ ಅಂಶ ಬಯಲು*

ಪ್ರಗತಿವಾಹಿನಿ ಸುದ್ದಿ: ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ತನಿಖೆ ಪೂರ್ಣಗೊಳಿಸಿದ್ದು., ಹೈಕೋರ್ಟ್ ಗೆ ಅಂತಿಮ ತನಿಖಾ ವರದಿ ಸಲ್ಲಿಸಿದೆ.

ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಸಿಬಿಐ ಅಧಿಕಾರಿಗಳನ್ನೊಳಗೊಂಡ ಎಸ್ ಐಟಿ ರಚಿಸಿ ತನಿಖೆಗೆ ಸೂಚನೆ ನೀಡಿತ್ತು. ಇದೀಗ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಎಸ್ ಐಟಿ 2300ಗಳ ವರದಿ ಸಲ್ಲಿಕೆ ಮಾಡಿದೆ.

Home add -Advt

ಎಸ್ ಐಟಿ ತನಿಖೆಯಲ್ಲಿ ವಕೀಲೆ ಜೀವಾಗೆ ಸಾವಿಗೂ ಮುನ್ನ ಬರೆದಿಟ್ಟಿದ್ದ ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದ ಬಹುತೇಕ ಅಂಶಗಳು ಸಾಬೀತಾಗಿವೆ. ಜೀವಾಗೆ ಚಿತ್ರಹಿಂಸೆ ನೀಡಿದ್ದು, ವಿವಸ್ತ್ರಗೊಳಿಸಿ ವಿಡಿಯೋ ಮಾಡಿದ್ದು, ಬಳಿಕ ಎಫ್ ಎಸ್ ಮೂಲಕ ವಿಡಿಯೋ ಡಿಲಿಟ್ ಮಾಡಿರುವುದು ತನಿಖೆಯಲ್ಲಿ ಬಯಲಾಗಿದೆ. ಎಸ್ ಐಟಿ ತನಿಖೆವೇಳೆ ಡಿಲಿಟ್ ಆಗಿದ್ದ ವಿಡಿಯೋ ರಿಟ್ರೀವ್ ಮಾಡಿದ್ದರು.

ನ.22ದು ವಕೀಲೆ ಜೀವಾ, ಡಿವೈಎಸ್ ಪಿ ಕನಕಲಕ್ಷ್ಮಿ ತನ್ನನ್ನು ವಿಚಾರಣೆ ನೆಪದಲ್ಲಿ ಕರೆದು ಚಿತ್ರಹಿಂಸೆ ನೀಡಿದ್ದಾರೆ. ಅವರ ಕಿರುಕುಳ, ಬೆದರಿಕೆಗೆ ನೊಂದು ಆತ್ಮಹತ್ಯೆ ಮಾಡಿಕೊಳ್ಲುತ್ತಿರುವುದಾಗಿ ಹಾಗೂ ನನ್ನ ಆತ್ಮಹತ್ಯೆಗೆ ಡಿವೈಎಸ್ ಪಿ ಕನಕಲಕ್ಷ್ಮೀಯೇ ಕಾರಣ ಎಂದು 13 ಪುಟಗಳ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದರು. ಬನಶಂಕರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಸ್ ಐಟಿಗೆ ಪ್ರಕರಣ ವರ್ಗಾವಣೆಯಾಗುತ್ತಿದ್ದಂತೆ ಮಾ.11ರಂದು ಡಿವೈಎಸ್ ಪಿ ಕನಕಲಕ್ಷ್ಮೀಯನ್ನು ಬಂಧಿಸಲಾಗಿತ್ತು. ಇದೀಗ ತನಿಖೆ ಪೂರ್ಣಗೊಳಿಸಿರುವ ಎಸ್ಐಟಿ 2300ಗಳ ತನಿಖಾ ವರದಿಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದೆ.

Related Articles

Back to top button