ಪ್ರಗತಿವಾಹಿನಿ ಸುದ್ದಿ ಬೆಳಗಾವಿ – ಅಯೋಧ್ಯೆಯಲ್ಲಿ ಮುಂಬರುವ ದಿನಗಳಲ್ಲಿ ರಾಮ ನೆಲೆಸುವುದು ಇಡಿ ಭಾರತೀಯರ ಹೃದಯದಲ್ಲಿ ರಾಮ ನೆಲೆಸುವುದರ ಮುನ್ಸೂಚಕವಾಗಲಿ. ಕಾಮ ಕ್ರೋಧ ದ್ವೇಷ ಮುಂತಾದ ಹತ್ತು ಹಲವಾರು ಮುಖದ ರಾವಣ ಅಳಿಯಲಿ ಎಂದು ಪರಮ ಪೂಜ್ಯ ಉತ್ತರಾಧಿಮಠದ ಶ್ರೀ ಸತ್ಯಾತ್ವತೀರ್ಥ ಸ್ವಾಮಿಗಳು ಕರೆಕೊಟ್ಟರು.
ಬಿ. ಕೆ. ಮಾಡೆಲ್ ಹಾಸ್ಕೂಲ್ ಹೊರ ಆವರಣದಲ್ಲಿ ಹಾಕಲಾಗಿದ್ದ ಭವ್ಯ ವೇದಿಕೆಯಲ್ಲಿ ಎಂಟು ದಿನಗಳ ಕಾಲ ನಗರದ ಪಾದುಕಾ ಮಹಾಸಮಾರಾಧನೆ ಸೇವಾ ಸಮಿತಿಯವರು ಹಮ್ಮಿಕೊಂಡಿರುವ ಶ್ರೀಮತ್ ಅನುವ್ಯಾಖ್ಯಾನ ಶ್ರೀಮನ್‌ನ್ಯಾಯಸುಧಾ ಮಂಗಲ ಮಹೋತ್ಸವ (ಶ್ರೀ ಜಯತೀರ್ಥ ವಿದ್ಯಾಪೀಠದ ವಿದ್ಯಾರ್ಥಿಗಳಿಂದ) ಹಾಗೂ ಶ್ರೀ ಸತ್ಯಪ್ರಮೋದತೀರ್ಥ ಶ್ರೀಪಾದಂಗಳವರ ೨೩ ನೇ ಪಾದುಕಾ ಮಹಾಸಮಾರಾಧನೆಯ ಎರಡನೇ ದಿನವಾದ ಇಂದು ಶ್ರೀಗಳು ಮೇಲಿಂತೆ ಹೇಳಿದರು.
ಜೀವ ಜಡ ಜಗತ್ತಿನಲ್ಲಿ ಸರ್ವಶಕ್ತ ಸರ್ವಜ್ಞ, ಸಕಲ ಸೃಷ್ಟಿಕರ್ತ, ಯಾವ ದೋಷವೂ ಇಲ್ಲದೇ ಇದ್ದದ್ದರಿಂದ ಆ ನಾರಾಯಣನಾದ ರಾಮನೇ ಸರ್ವೋತ್ತಮ ಎಂಬ ತತ್ವವನ್ನು ಸಾರಿದ ಶ್ರೀಮನ್ ಮಧ್ವಾಚಾರ್ಯರು ವಿಜ್ಞಾನದ ನಿಜವಾದ ಅತ್ಯುತ್ತಮ ವಿಷಯಗಳಿಂದ ಕಾಲ, ಜ್ಞಾನ, ಭ್ರಮೆ, ಮನಸ್ಸು ಇವೆಲ್ಲದರ ಬಗ್ಗೆ ಬೆಳಕು ಚೆಲ್ಲುವುದಷ್ಟೇ ಅಲ್ಲ ಪರಿಪೂರ್ಣವಾದ ಸತ್ಯವಾದ ತಿಳುವಳಿಕೆ ಬರಲು ಪುಣ್ಯ ಕಾರಣ ಎಂದರು.
ಕೇಂದ್ರ ಸಚಿವ ಸುರೇಶ ಅಂಗಡಿ ಆಗಮಿಸಿ ಗುರುಗಳ ಆಶಿರ್ವಾದ ಪಡೆದರು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಉಚ್ಛನ್ಯಾಯಾಲಯ ತೀರ್ಪು ಕೊಡಲು ಶ್ರೀ ಸತ್ಯಾತ್ಮರಂಥ ಮಹಾನುಭಾವರ ತಪಸ್ಸೇ ಕಾರಣ ಎಂದರು. ತಾವು ಅವರ ಆಶಿರ್ವಾದದಿಂದಲೇ ಕೇಂದ್ರ ಸಚಿವರಾಗಿ ಜನರ ಆಶೋತ್ತರಗಳನ್ನು ಪುರೈಸುವ ರೇಲ್ವೆಯ ಅನೇಕ ಯೋಜನೆಗಳನ್ನು ಮಾಡಿದ್ದೇವೆ. ಪ್ರಜೆಗಳಿಗೆ ಅನಕೂಲವಾಗುವ ಮಹತ್ತರ ಕೆಲಸಗಳನ್ನು ಪಡೆಯಲು ಗುರಗಳ ಆಶಿರ್ವಾದ ಇರಲಿ ಎಂದು ಹೇಳಿದರು.
ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ, ಸಣ್ಣ ನೀರಾವರಿ ಇಲಾಖೆಯ ಸಚಿವರಾದ ಗೋವಿಂದ ಕಾರಜೋಳ ಆಗಮಿಸಿ ಶ್ರೀಗಳ ಆಶಿರ್ವಾದ ಪಡೆದರು.
ಕೇಶವ ಮಾಹುಲಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಅಖಂಡ ನಾಮಸ್ಮರಣೆ ಒಂದೆಡೆ ನಡೆದಿದದ್ದು ಇದರಲ್ಲಿ ಐವತ್ತಕ್ಕು ಹೆಚ್ಚು ಭಜನಾ ಮಂಡಳುಗಳು ಪಾಲ್ಗೊಂಡಿದೆ. ದಿ. ೧೦ ರಿಂದ ೧೭ ರವರೆಗೆ ಹಗಲು ರಾತ್ರಿ ನಿರಂತರವಾಗಿ ನಡೆಯುವ ಈ ಅಖಂಡ ನಾಮಸ್ಮರಣೆಯಲ್ಲಿ ಗೋಕಾಕ, ಕಾಕತಿ, ಚಿಕ್ಕೋಡಿ, ರಾಮದುರ್ಗ ಉಗಾರ, ಚಿಕ್ಕೋಡಿ ಅಲ್ಲದೇ ಧಾರವಾಡದಿಂದ ಬಂದಿರುವ ಭಜನಾ ಮಂಡಳಿಗಳು ಈ ಅಖಂಡ ನಾಮಸ್ಮರಣೆಯಲ್ಲಿ ಪಾಲ್ಗೊಂಡಿವೆ.
ಸಾಂಸ್ಕೃತಿಕ ಕಾರ‍್ಯಕ್ರಮದಲ್ಲಿ ವಿಜಯ ವಿಠ್ಠಲ ಅಂಬೇಕರ ಯತಿ ಪರಂಪರೆ ಕು. ಆದ್ಯಾ ಯಾದವಾಡಳಿಂದ ಭರತ ನಾಟ್ಯ, ಕು. ಸಂಜೀವಿನಿ ಹುಕ್ಕೇರಿ ಇವಳಿಂದ ಭಕ್ತಿ ಸಂಗೀತ, ಎನ್. ಎಸ್. ಪೈ. ಶಾಲಾ ಶಿಕ್ಷಕಿಯರಿಂದ, ಅನಂತ ಪುರಂದರ ಭಜನಾ ಮಂಡಳ ಹಾಗೂ ಇಂಡಾಲ ನಗರದ ವಾಣಿ ಭಜನಾ ಮಂಡಳದವರಿಂದ ಕೋಲಾಟ. ಹಾಗೂ ಗುರುಪ್ರಾಸದ ನಗರದ ರಾಘವೇಂದ್ರ ಭಜನಾ ಮಂಡಳದವರಿಂದ ’ದ್ರೌಪದಿಯ ಮಾನ ರಕ್ಷಣೆ’ ಹಾಗೂ ಸಮನಾ ಭಜನಾ ಮಂಡಳಿಯವರಿಂದ ರೂಪಕ, ವಾರುಣಿ ಸತ್ಯಂ ಅವರಿಂದ ಏಕಪಾತ್ರಾಭಿನಯಗಳು ಜರುಗಿದವು. ಪ್ರೊ. ಜಿ. ಕೆ. ಕುಲಕರ್ಣಿ ಹಾಗೂ ವ್ಯಾಸಾಚಾರ್ಯ ಅಂಬೇಕರ ಕಾರ‍್ಯಕ್ರಮಗಳ ನೇತೃತ್ವವನ್ನು ವಹಿಸಿದ್ದಾರೆ.
ದೇಶದ ಉನ್ನತಿಗಾಗಿ ಧರ್ಮದ ಸಂರಕ್ಷಣೆ ಅತ್ಯವಶ್ಯವಾಗಿದೆ
ರಾಮಮಂದಿರ ನೋಡುವ ಸೌಭಾಗ್ಯ ನಮ್ಮದು -ಉತ್ತರಾದಿ ಮಠದ ಶ್ರೀ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ