Kannada NewsKarnataka NewsLatestPolitics

*ನಾನು ಮಂಡ್ಯ ಬಿಟ್ಟು ಎಲ್ಲೂ ಹೋಗಲ್ಲ: ಸುಮಲತಾ*

ಪ್ರಗತಿವಾಹಿನಿ ಸುದ್ದಿ: ಲೋಕಸಭೆ ಚುನಾವಣೆ ಅಖಾಡ ರಂಗೇರಿದ್ದು, ಸುಮಲತಾಗೆ ಮಂಡ್ಯ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬೆಂಗಳೂರಿನ ಜೆ.ಪಿ.ನಗರ ನಿವಾಸದ ಬಳಿ ಅಭಿಮಾನಿಗಳ ಸಭೆ ನಡೆಸಿದ್ರು. ಈ ಸಭೆಯಲ್ಲಿ ಸಂಸದೆ ಸುಮಲತಾ ಅವರು ಅಭಿಪ್ರಾಯ ಕೇಳಿದ್ದಾರೆ. ಏ.3ರಂದು ನಾನು ಮಂಡ್ಯದಲ್ಲಿ ಸಭೆ ನಡೆಸಿ ನನ್ನ ನಿರ್ಧಾರ ಏನು ಅನ್ನೋದನ್ನ ತಿಳಿಸುತ್ತೇನೆ ಎಂದಿದ್ದಾರೆ

ಅಭಿಮಾನಿಗಳು ಸುಮಾಲತಾ ಅವರಿಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವಂತೆ ಆಗ್ರಹಿಸಿದ್ದಾರೆ. ಯಾವುದೇ ಪಕ್ಷಕ್ಕೂ ಸೇರ್ಪಡೆ ಆಗದೆ, ಸ್ವಾಭಿಮಾನದಿಂದಲೇ ಸ್ಪರ್ಧೆ ಮಾಡುವಂತೆ ಅಭಿಮಾನಿಗಳು ಒತ್ತಾಯಿಸಿದ್ದಾರೆ. 2019ರ ಇತಿಹಾಸ ಮರುಕಳಿಸುವ ಆಶ್ವಾಸನೆ ಜನರು ಕೊಟ್ಟಿದ್ದಾರೆ.

ನಾನು ಮಂಡ್ಯ ಬಿಟ್ಟು ಎಲ್ಲೂ ಹೋಗಲ್ಲ. ಇವತ್ತಿಗೂ ಜನರು ನನ್ನ ಪರ ಇದ್ದಾರೆ. ಮಂಡ್ಯದ ಮಣ್ಣಿನ ಋಣ ನನ್ನ ಮೇಲಿದೆ. ಏ.3ರಂದು ನಾನು ಮಂಡ್ಯದಲ್ಲಿ ಸಭೆ ನಡೆಸಿ ನನ್ನ ನಿರ್ಧಾರ ಏನು ಅನ್ನೋದನ್ನ ತಿಳಿಸುತ್ತೇನೆ ಎಂದಿದ್ದಾರೆ. ಈ ಮೂಲಕ ಸುಮಲತಾ ಅವರು ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button